‘ವಾಸಂತಿ ಶ್ರೀವತ್ಸ ಇನ್ನೂ ಬದುಕಿದ್ದಾಳೆ’: ಸುಜಾತಾ ಭಟ್ ಗೊಂದಲದ ಹೇಳಿಕೆ
Saturday, August 30, 2025
ಮಂಗಳೂರು: ಅನನ್ಯಾ ಭಟ್ ಎಂಬ ಮಗಳಿದ್ದಾಳೆ, ಇಲ್ಲ, ಅನನ್ಯಾ ಭಟ್ ಕಾಲ್ಪನಿಕ ಪಾತ್ರ ಎಂದೆಲ್ಲಾ ಹೇಳಿ ಸಾಕಷ್ಟು ಗೊಂದಲ ಮೂಡಿಸಿದ ಸುಜಾತಾಭಟ್ ಮತ್ತೊಮ್ಮೆ ಗೊಂದಲಕಾರಿ ಹೇಳಿಕೆ ನೀಡಿದ್ದಾರೆ.
ಸುಜಾತಾ ಭಟ್ ಹೆಣೆದ ಪಾತ್ರಗಳಲ್ಲಿ ವಾಸಂತಿ ಶ್ರೀವತ್ಸ ಇನ್ನೂ ಜೀವಂತವಿದ್ದಾರೆ. ವಾಸಂತಿಯ ಶವ ಸಿಕ್ಕಿದ್ದು ನದಿಯಲ್ಲಿ ಅದು ಕೊಳೆತಿತ್ತು. ಅದು ವಾಸಂತಿಯ ಶವ ಆಗಿರಲಿಲ್ಲ, ಕೊಳೆತ ಶವ ವಾಸಂತಿಯದ್ದು ಎಂದು ಹೇಗೆ ನಂಬಿದಿರಿ ಎಂದು ತನಿಖೆ ವೇಳೆ ಎಸ್‌ಐಟಿಗೆ ಮರು ಪ್ರಶ್ನೆ ಹಾಕಿದ್ದಾರೆ ಎನ್ನಲಾಗಿದೆ.
ಅನನ್ಯಾ ಭಟ್ ಎಂದು ಹೇಳಿ ಸುಜಾತಾ ಭಟ್ ವಾಸಂತಿ ಶ್ರೀವತ್ಸರವರ ಪೋಟೊ ತೋರಿಸಿದ್ದರು. ವಾಸ್ತವದಲ್ಲಿ ವಾಸಂತಿ ಶ್ರೀವತ್ಸ ನದಿಗೆ ಬಿದ್ದು ಸಾವಿಗೀಡಾಗಿದ್ದು, ಈಗ ಆಕೆ ಬದುಕಿದ್ದಾಳೆ ಎಂದು ಸುಜಾತಾ ಭಟ್ ಮತ್ತೊಮ್ಮೆ ಗೊಂದಲ ಸೃಷ್ಟಿಸಿದ್ದಾರೆ.