ಆಥಿ೯ಕ ಬಲವಧ೯ನೆಗೆ ಸಂಜೀವಿನಿ ಸ್ವ-ಸಹಾಯ ಗುಂಪುಗಳು ಸಹಕಾರಿ
ಅವರು ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮೂಡಬಿದ್ರಿ ತಾಲೂಕು ಪಂಚಾಯತ್, ಶಿತಾ೯ಡಿ ಗ್ರಾಮ ಪಂಚಾಯತ್ ಇವುಗಳ ಸಹಯೋಗದೊಂದಿಗೆ ಶ್ರೀ ತುಳಸಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶಿರ್ತಾಡಿ ಇದರ ವಾರ್ಷಿಕ ಮಹಾಸಭೆಯನ್ನು ಸಂಜೀವಿನಿ ಕಟ್ಟಡದ ಆವರಣದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲಿಂಗ ತಜ್ಞರಾದ ವಿಶಾಲಾಕ್ಷಿ, ಸಂಪನ್ಮೂಲ ವ್ಯಕ್ತಿ ಅಮಿತಾ ಮಹಿಳೆಯರ ಕುರಿತ ಮಾಹಿತಿಗಳನ್ನು ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಾಮೋದರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ನಳಿನಿ ಪಂಚಾಯತ್ ಸದಸ್ಯರಾದ ಶ್ರೀಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸವಿತಾ ಭಂಡಾರಿ, ಕಾರ್ಯದರ್ಶಿಯಾಗಿ ಶೋಭಾ ಆಯ್ಕೆಯಾದರು.
ಪ್ರಮೀಳಾ ಪ್ರಾರ್ಥನೆಗೈದರು. ಎಲ್ ಸಿ ಆರ್ ಪಿ ಸುಧಾ ಸ್ವಾಗತಿಸಿದರು. ಕೃಷಿ ಸಖಿ ಮಮತಾ ಧನ್ಯವಾದವಿತ್ತರು. ಕಾರ್ಯದರ್ಶಿ ಕವಿತ ವಾರ್ಷಿಕ ವರದಿ ಹಾಗೂ ಎಲ್ ಸಿ ಆರ್ ಪಿ ಶುಭಮಣಿ ಲೆಕ್ಕಪರಿಶೋಧನ ವರದಿ ಮಂದಿಸಿದರು. ಎಂ. ಬಿ. ಕೆ. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಪಶುಸಖಿ ರೇಖಾ, ಬಿ ಆರ್ ಪಿ ಇ ಪಿ ಕುಶಲ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
