ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‌ನಿಂದ ಸ್ವಾತಂತ್ರ್ಯೋತ್ಸವ ಆಚರಣೆ
Friday, August 15, 2025
ಮೂಡುಬಿದಿರೆ: 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಇದರ ವತಿಯಿಂದ ಕೀತಿ೯ನಗರದ ಕ್ಲಬ್‌ನ ಆವರಣದಲ್ಲಿ ಇರುವ ಧ್ವಜಕಟ್ಟೆಯಲ್ಲಿ ಮೂಡುಬಿದಿರೆ ಸಾವ೯ಜನಿಕ ಗಣೇಶೋತ್ಸವ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ. ಅವರು ಧ್ವಜಾರೋಹಣಗೈದು ಶುಭಾಷಯ ಕೋರಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷ ಹರೀಶ್ ಎಂ.ಕೆ. ಹಾಗೂ ಕಾರ್ಯದರ್ಶಿ ಭರತ್ ಶೆಟ್ಟಿ ಮತ್ತು ವಲಯ 4ರ ಅಸಿಸ್ಟೆಂಟ್ ಗವರ್ನರ್ ಉಮೇಶ್ ರಾವ್ ಮತ್ತು ಮಾಜಿ ಅಧ್ಯಕ್ಷ ಪೂರ್ಣಚಂದ್ರ ಜೈನ್, ಖಜಾಂಜಿ ಮಹಾವೀರ ಜೈನ್, ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು, ಕೀರ್ತಿ ನಗರ ಅಸೋಷಿಯೇಷನ್‌ನ ಅಧ್ಯಕ್ಷ ಉದಯಕುಮಾರ್ ಮತ್ತು ಸದಸ್ಯರು ಹಾಜರಿದ್ದರು.
