ಪಾಲಡ್ಕ ಗ್ರಾ.ಪಂನಿಂದ ಯೋಧ ರವೀಂದ್ರ ಜಿ.ಯವರಿಗೆ ಸನ್ಮಾನ
Sunday, August 17, 2025
ಮೂಡುಬಿದಿರೆ: ಕಳೆದ ಐದು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಾಲಡ್ಕದ ರವೀಂದ್ರ ಜಿ. ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದಭ೯ ಪಾಲಡ್ಕ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.
ಪಂಚಾಯತ್ ಅಧ್ಯಕ್ಷೆ ಅಮಿತಾ ನಾಯ್ಕ್, ಉಪಾಧ್ಯಕ್ಷ ಪ್ರವೀಣ್ ಸಿಕ್ವೇರ, ಪಿಡಿಒ ರಕ್ಷಿತಾ ಡಿ.,ಕಾರ್ಯದರ್ಶಿ ಮೋಹಿನಿ ಶೆಟ್ಟಿ, ಸದಸ್ಯರಾದ ದಿನೇಶ್ ಕಾಂಗ್ಲಾಯಿ, ಸುಕೇಶ್ ಶೆಟ್ಟಿ ಕೇಮಾರು, ಸುನೀತಾ ಶೆಟ್ಟಿ, ರಂಜಿತ್ ಭಂಡಾರಿ, ಜಗದೀಶ್ ಕೋಟ್ಯಾನ್, ಸುರೇಶ್ ಪೂಜಾರಿ, ಸವಿತಾ, ಕಾಂತಿ ಶೆಟ್ಟಿ, ಸುಧೀರ್ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.