ಗಾಯನದಲ್ಲಿ ವಿಶ್ವದಾಖಲೆ: ಗೃಹ ಸಚಿವರಿಂದ ಯಶವಂತ್ ಎಂ.ಜಿ.ಗೆ ಅಭಿನಂದನೆ
Sunday, August 24, 2025
ಮೂಡುಬಿದಿರೆ: ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ 270ಕ್ಕೂ ಅಧಿಕ ಹಾಡುಗಳನ್ನು 24 ಗಂಟೆಗಳ ಕಾಲ ನಿರಂತರವಾಗಿ ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪಡೆದು ವಿಶ್ವದಾಖಲೆ ಬರೆದ ಮೂಡುಬಿದಿರೆಯ ಯಶವಂತ್ ಎಂಜಿ ಯವರನ್ನು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶನಿವಾರ ಅಭಿನಂದಿಸಿದರು.
ಉಡುಪಿಯ ಡಾ.ಜಿ.ಶಂಕರ್ ಮಹಿಳಾ ಕಾಲೇಜಿಗೆ ಆಗಮಿಸಿದ ಸಚಿವರು ಯಶವಂತ್ ಅವರ ದಾಖಲೆಗಳನ್ನು ಪರಿಶೀಲಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ರಘುಪತಿ ಭಟ್, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಇದರ ರಾಜ್ಯ ಉಪಾಧ್ಯಕ್ಷ ಮಹೇಶ್ ಠಾಕೂರ್,ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಶೆಟ್ಟಿ ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.