ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ದಿನಾಚರಣೆ
ಸಂತ ಫಿಲೋಮಿನಾ ಪದವಿ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಡಾ. ಆಂಟೋನಿ ಪ್ರಕಾಶ್ ಮೊಂತೆರೊ ಮಾತನಾಡಿ, ಜೀವನದಲ್ಲಿ ನಾವು ಸ್ವಲ್ಪ ಗಂಭೀರವಾಗಿರಬೇಕು. ಧ್ವಜದಲ್ಲಿ ಮೂರು ಬಣ್ಣಗಳಿವೆ, ಕೇಸರಿ ತ್ಯಾಗದ ಸಂಕೇತ, ಬಿಳಿ ಶುದ್ಧತೆಯ ಸಂಕೇತ, ಹಸಿರು ಸಮೃದ್ಧಿಯ ಸಂಕೇತ. ತ್ಯಾಗ, ಶುದ್ಧತೆ, ಸಮೃದ್ಧಿ ಇದು ಮನುಷ್ಯನಲ್ಲಿ ಇದ್ದರೆ ಅವನು ಸಂಪೂರ್ಣ. ಜೀವನದಲ್ಲಿ ಸ್ವಾರ್ಥ, ಭ್ರಷ್ಟತೆ ಮತ್ತು ಸೋಮಾರಿತನವನ್ನು ಬಿಡಬೇಕು. ದೇಶಭಕ್ತಿ ಎಂಬುವುದು ಶ್ರಮ, ಶಿಸ್ತು ಮತ್ತು ಒಗ್ಗಟ್ಟಿನಿಂದ ಇರುವ ಜನರಿಂದ ಪ್ರದರ್ಶಿಸಲ್ಪಡಬೇಕು ಎಂದು ಹೇಳಿದರು.
ಎನ್ಸಿಸಿ ಆರ್ಮಿ ವಿಂಗ್ಸ್ ಮತ್ತು ನೌಕ ವಿಭಾಗದ ಕೆಡೆಟ್ಗಳು, ರೋವರ್ಸ್-ರೆಂಜರ್ಸ್, ಎನ್ಎಸ್ಎಸ್ ಸ್ವಯಂ ಸೇವಕರು, ಜೂನಿಯರ್ ಮತ್ತು ಯೂತ್ ರೆಡ್ಕ್ರಾಸ್ ಘಟಕ ಮತ್ತು ಬ್ಯಾಂಡ್ ಟ್ರೂಪ್ ಭಾಗವಹಿಸಿದರು. ಎಸ್ಜಿಟಿ ದಿಯಾ ಕೆ. ಪೆರೇಡ್ನ ನೇತೃತ್ವ ವಹಿಸಿದ್ದರು.
ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಸ್ವಾತಂತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಎನ್ಸಿಸಿ ಅಧಿಕಾರಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೆರಾ, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ. ಮತ್ತು ಪುಷ್ಪಾ ಎನ್., ರೋವರ್ ಸ್ಕೌಟ್ ಲೀಡರಾದ ಚಂದ್ರಾಕ್ಷ, ಜೂನಿಯರ್ ಮತ್ತು ಯೂತ್ ರೆಡ್ಕ್ರಾಸ್ ಘಟಕದ ಸಂಚಾಲಕರಾದ ಜ್ಯೋತಿ ಎಂ., ರಾಜೇಶ್ ಮೂಲ್ಯ ಮತ್ತು ಡಾ. ಡಿಂಪಲ್ ಜೇನಿಫರ್ ಫೆರ್ನಾಂಡಿಸ್, ಲಲಿತ ಕಲಾ ಸಂಘದ ಸಂಚಾಲಕರಾದ ರಶ್ಮಿ ಪಿ.ಎಸ್. ಮತ್ತು ಪ್ರಶಾಂತ್ ರೈ, ಉಪ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಎಂ., ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಎಸ್. ಡಿಸೋಜಾ, ಶೈಕ್ಷಣಿಕ ಕುಲಸಚಿವ ಡಾ. ನೋರ್ಬಟ್ ಮಸ್ಕರೇನ್ಹಸ್ ಮತ್ತು ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಆಫೀಸ್ ಸುಪರಿಂಟೆಂಡೆಂಟ್ ರೂಫಿನಾ ಡಿಸೋಜಾ, ಪಿಆರ್ಓ ಭಾರತಿ ಎಸ್. ರೈ, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭೌತಶಾಸ್ತ್ರ ವಿಭಾಗದ ಪ್ರಾಧ್ಯಪಕ ಡಾ. ಚಂದ್ರಶೇಖರ್ ಕೆ. ವಂದಿಸಿ, ಪೂಜಾಶ್ರೀ ವಿ. ರೈ ಕಾರ್ಯಕ್ರಮವನ್ನು ನಿರೂಪಿಸಿದರು.

