ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಆಟಿದ ಲೇಸ್’

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಆಟಿದ ಲೇಸ್’


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರು, ತುಳು ಸಾಹಿತ್ಯ ಸಂಘ ಹಾಗೂ ತುಳುವ ಮಹಾ ಸಭೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ‘ಆಟಿದ ಲೇಸ್’, ಮಂದಾರ ರಾಮಾಯಣ-ಅಜ್ಜೆರೆ ಸಾಲೆ-ಸುಗಿಪು-ದುನಿಪು ಕಾರ್ಯಕ್ರಮವನ್ನು ಆಯೋಜಿಸಲಾಯಿತು. 


ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಜೇಶ್ ಭಟ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಟಿ ತಿಂಗಳಿನ ಮಹತ್ವ, ತುಳುನಾಡು ಮತ್ತು ತುಳು ಭಾಷೆಯ ಸಮೃದ್ಧತೆಗಳ ಬಗ್ಗೆ ತಿಳಿಸಿದರು. 


ಸುಗಿಪು-ದುನಿಪು ವಿಶೇಷ ಕಾರ್ಯಕ್ರಮದಲ್ಲಿ ತುಳು ಮಹಾಕಾವ್ಯ ಮಂದಾರ ರಾಮಾಯಣದ ಅಜ್ಜೆರೆ ಸಾಲೆ ಭಾಗವನ್ನು ಉಪನ್ಯಾಸಕರಾದ ಪ್ರಶಾಂತ್ ರೈ ಹಾಗೂ ರಚನಾ ಚಿದ್ಗಲ್ಲು ಹಾಡಿ, ಪ್ರೊ. ವೆಂಕಟ್ರಮಣ ಭಟ್ಟ ಸುಳ್ಯ ವಾಚಿಸಿದರು. 

ಸಮಾರೋಪ ಕಾರ್ಯಕ್ರಮದಲ್ಲಿ ತುಳು ವರ್ಲ್ಡ್ ಫೌಂಡೇಶನ್‌ನ ಡಾ. ರಾಜೇಶ್ ಆಳ್ವ, ಮಂದಾರ ಪ್ರತಿಷ್ಠಾನದ ಶಾರದಾಮಣಿ, ಪ್ರಮೋದ್ ಸಪ್ರೆ, ಹರಿಪ್ರಸಾದ್ ರೈ ಜಿ ಕೆ, ತುಳು ಮಹಾಸಭೆಯ ಹರಿಣಾಕ್ಷಿ ಜೆ ರೈ, ಡಾ. ಅನಿಲ್ ಕುಮಾರ್ ರೈ, ಮಿಲನ್ ಗೌಡ ಮತ್ತು ಪುತ್ತೂರು ತುಳು ಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಉಪಸ್ಥಿತರಿದ್ದರು. 

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂರವರು ಮಂದಾರ ಕೇಶವ ಭಟ್ಟರ ತುಳುಸಾಹಿತ್ಯ ಪ್ರೌಢಿಮೆಯ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾದ ತುಳು ಕೃತಿಗಳನ್ನು ಓದುವಂತೆ ವಿನಂತಿಸಿದರು. 

ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ತುಳು ಸಾಹಿತ್ಯ ಸಂಘದ ಸಂಯೋಜಕಿ ಅಕ್ಷತಾ ಬಿ. ಸ್ವಾಗತಿಸಿ, ತುಳು ಮಹಾಸಭೆಯ ಪುತ್ತೂರು ತಾಲೂಕಿನ ಸಂಚಾಲಕಿ ಶ್ರೀಶವಾಸವಿ ವಂದಿಸಿದರು. ಕಾಲೇಜಿನ ತುಳು ಸಾಹಿತ್ಯ ಸಂಘದ ನಿರ್ದೇಶಕರು ಹಾಗೂ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. 

ಸಂಸ್ಥೆಯ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊರವರ ಮಾರ್ಗದರ್ಶನದಂತೆ ಆಟಿದ ಲೇಸ್ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article