ದಶಲಕ್ಷಣ ಪರ್ವ ಆಚರಣೆ

ದಶಲಕ್ಷಣ ಪರ್ವ ಆಚರಣೆ

ಉಜಿರೆ: ಜೈನಧರ್ಮದ ಸಂಪ್ರದಾಯದಂತೆ ಆಧ್ಯಾತ್ಮಿಕ ಮತ್ತು ಸಂಸ್ಕಾರದ ಉನ್ನತಿಗಾಗಿ ಪ್ರತಿವರ್ಷ ಭಾದ್ರಪದ ಮಾಸದ ಪಂಚಮಿಯಿಂದ ಹುಣ್ಣಿಮೆ ವರೆಗೆ ‘ದಶಲಕ್ಷಣ’ ಪರ್ವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ.

ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ. ಎಲ್ಲವೂ ನಿತ್ಯವೂ ಪಾಲಿಸಬೇಕಾದ ತತ್ವಗಳಾಗಿದ್ದು, ಇವು ಶ್ರೇಷ್ಠವಾದುದರಿಂದ ಪ್ರತಿಯೊಂದು ತತ್ವದ ಹಿಂದೆ ‘ಉತ್ತಮ’ ಎಂಬ ವಿಶೇಷಣ ಬಳಸುತ್ತಾರೆ.

ಈ ಬಾರಿ ಆ.28 ರಿಂದ ಸೆ. 6ರ ವರೆಗೆ ದಶಲಕ್ಷಣ ಪರ್ವವನ್ನು ಆಚರಿಸಲಾಗುತ್ತದೆ.

ಆ.28 ರಂದು ಉತ್ತಮ ಕ್ಷಮಾಧರ್ಮ, ಆ.29 ರಂದು ಉತ್ತಮ ಮಾರ್ದವ ಧರ್ಮ, ಆ.30 ರಂದು ಉತ್ತಮ ಆರ್ಜವ ಧರ್ಮ, ಆ.31 ರಂದು ಉತ್ತಮ ಶೌಚ ಧರ್ಮ, ಸೆ.1 ರಂದು ಉತ್ತಮ ಸತ್ಯಧರ್ಮ, ಸೆ.2 ರಂದು ಉತ್ತಮ ಸಂಯಮ ಧರ್ಮ, ಸೆ.3 ರಂದು ಉತ್ತಮತಪ ಧರ್ಮ, ಸೆ.4 ರಂದು ಉತ್ತಮ ತ್ಯಾಗ ಧರ್ಮ, ಸೆ.5 ರಂದು ಉತ್ತಮ ಆಕಿಂಚನ್ಯ ಧರ್ಮ, ಸೆ.೬ ರಂದು ಉತ್ತಮ ಬ್ರಹ್ಮಚರ್ಯ

ದಶಲಕ್ಷಣ ಪರ್ವ ಆಚರಣೆ ಬಳಿಕ ‘ಕ್ಷಮಾವಳಿ’ ನಡೆಯುತ್ತದೆ. ಅಂದರೆ, ಬಂಧುಗಳಲ್ಲಿ ಆಪ್ತಮಿತ್ರರಲ್ಲಿ ವ್ಯವಹಾರದಲ್ಲಿ ಮನ, ವಚನ, ಕಾಯದಿಂದ ಯಾವುದೇ ತಪ್ಪು ಆದಲ್ಲಿ ಅದಕ್ಕೆ ಪಶ್ಚಾತ್ತಾಪಪಟ್ಟು ಕ್ಷಮೆ ಯಾಚಿಸುವುದೇ ‘ಕ್ಷಮಾವಳಿ’ ಆಗಿದೆ. ಸದ್ಯ, ಕಾಲಕ್ಕೆ ತಕ್ಕಂತೆ ಸಂವಹನ, ದೂರವಾಣಿ, ಪತ್ರ ಮೂಲಕ ‘ಕ್ಷಮಾವಳಿ’ ಆಚರಿಸುವ ಪದ್ಧತಿ ಇದೆ.

ದಶಲಕ್ಷಣ ಪರ್ವದ ಸಂದರ್ಭದಲ್ಲಿ ಎಲ್ಲಾ ಬಸದಿಗಳಲ್ಲಿ ವಿಶೇಷ ಪೂಜೆ, ಆರಾಧನೆ, ನಡೆಯುತ್ತದೆ. ಎಲ್ಲಾ ಶ್ರಾವಕರು ಬಸದಿಗೆ ಹೋಗಿ ದೇವರ ದರ್ಶನ ಮಾಡಿ, ಜಪ, ತಪ, ಧ್ಯಾನ, ಸ್ವಾಧ್ಯಾಯದಲ್ಲಿ ನಿರತರಾಗುತ್ತಾರೆ. ಉಪವಾಸ ಮೊದಲಾದ ವೃತ-ನಿಯಮಗಳನ್ನೂ ಪಾಲಿಸಿ ಧಾರ್ಮಿಕ ಹಾಗೂ ಆಧ್ಯಾತ್ಮ ಚಿಂತನೆಯಲ್ಲಿ ನಿರತರಾಗುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article