ಶಿರಾಡಿ ಘಾಟ್‌ನಲ್ಲಿ ಮತ್ತೆ ಗುಡ್ಡ ಕುಸಿತ

ಶಿರಾಡಿ ಘಾಟ್‌ನಲ್ಲಿ ಮತ್ತೆ ಗುಡ್ಡ ಕುಸಿತ


ಉಪ್ಪಿನಂಗಡಿ: ಪಶ್ಚಿಮಘಟ್ಟದ ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿರಾಡಿ ಘಾಟ್ ವ್ಯಾಪ್ತಿಯ ಕೆಂಪು ಹಳ್ಳ ಎಂಬಲ್ಲಿ ಗುಡ್ದ ಜರಿತವುಂಟಾಗಿದ್ದು, ಹೆದ್ದಾರಿಯಲ್ಲಿನ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಹಾಗೂ ನೇತ್ರಾವತಿ ಕುಮಾರಧಾರ ನದಿಗಳಲ್ಲಿ ನೀರಿನ ಹರಿವಿನಲ್ಲಿ ಶನಿವಾರದಂದು ಡಿಢೀರ್ ಹೆಚ್ಚಳವುಂಟಾಗಿದೆ.

ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕೆಂಪಳ್ಳದಲ್ಲಿ ಸಾಯಂಕಾಲದ ವೇಳೆ ಗುಡ್ಡದಿಂದ ಮಣ್ಣು ಜರಿದು ಹೆದ್ದಾರಿಗೆ ಬಿದ್ದಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆಯಾದರೂ, ಸಕಾಲಿಕ ಕಾರ್ಯಾಚರಣೆಯಿಂದಾಗಿ ರಾತ್ರಿ ವೇಳೆ ವಾಹನ ಸಂಚಾರವನ್ನು ಪುನರಾರಂಭಗೊಳಿಸಲಾಗಿದೆ.

ಈ ಮಧ್ಯೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮಾಧಾರ ನದಿಗಳಲ್ಲಿ ಸಾಯಂಕಾಲದ ವೇಳೆಗೆ ನೀರಿನ ಮಟ್ಟ 26.03 ಇದೆ. ಬೆಳಗ್ಗೆ ನೀರಿನ ಮಟ್ಟ 25.07 ಇತ್ತು. ಕಳೆದ ಮೂರು ದಿನಗಳಿಂದ ಬಿರುಗಾಳಿ ಸಹಿತ ಮಳೆ ಪದೇ ಪದೇ ಸುರಿಯುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article