ಜೀವನ ಶೈಲಿ ಹಾಗೂ ಆಹಾರ ಕ್ರಮಗಳ ಬಗ್ಗೆ ಗಮನ ಇರಲಿ-ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದ ಬಗ್ಗೆ ನಿರ್ಲಕ್ಷ್ಯ ಸಲ್ಲದು: ಡಾ. ನವೀನ್ ಚಂದ್ರ ಕುಲಾಲ್
ಅವರು ಇಂದು ಕದ್ರಿ ಹೋಟೆಲ್ ಡಿಂಕಿ ಡೈನ್ ಆವರಣದಲ್ಲಿ ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಹಾಗೂ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ(ರಿ.) ಮಂಗಳೂರು ಮತ್ತು ಹೋಟೆಲ್ ಡಿಂಕಿ ಡೈನ್ ಸಹಯೋಗದೊಂದಿಗೆ ವೈದ್ಯರ ದಿನಾಚರಣೆ ಹಾಗೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಂಜೆತನ ಏನು? ಎತ್ತ? ದಂಪತಿಗಳಿಗೆ ಕಿವಿ ಮಾತು, ಅಸಾಂಕ್ರಾಮಿಕ ರೋಗಗಳ ಬಗ್ಗೆ, ಆರೋಗ್ಯ ಜನಜಾಗೃತಿ ಮಾಹಿತಿ ಮತ್ತು ಉಚಿತ ಬಂಜೆತನ ನಿವಾರಣಾ ಸಲಹಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಕುಟುಂಬ ವೈದ್ಯರ ಸಂಘದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಕಳೆದ 27 ವರ್ಷಗಳಿಂದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಹತ್ತಾರು ಸಂಘಟನೆಗಳ ಸಹಕಾರದೊಂದಿಗೆ ಇಂತಹ ಆರೋಗ್ಯ ಜಾಗೃತಿ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದು ಇದು 275 ನೇ ಕಾರ್ಯಕ್ರಮ ಎಂದರು.
ಮಂಗಳೂರು ನೋವಾ ಐವಿಎಫ್ ಫರ್ಟಿಲಿಟಿ ಹಿರಿಯ ವೈದ್ಯೆ ಡಾ.ಶವೀಝ್ ಫೈಝಿ ಬಂಜೆತನ ಏನು ಎತ್ತ ದಂಪತಿಗಳಿಗೆ ಕಿವಿಮಾತು ಹೇಳಿ ಬಂಜೆತನವನ್ನು ಮೊದಲ ಹಂತದಲ್ಲೇ ವೈದ್ಯರ ಬಳಿ ಸಂಪರ್ಕಿಸಿದಾಗ ಪರಿಹಾರ ಸುಲಭವಾಗುತ್ತದೆ ಎಂದರು.
ಮಂಗಳೂರು ಭಾರತೀಯ ವೈದ್ಯರ ಸಂಘದ ಮಾಜಿ ಅಧ್ಯಕ್ಷ ಡಾ. ಜಿ.ಕೆ. ಭಟ್ ಸಂಕಬಿತ್ತಿಲು ಕಾರ್ಯಕ್ರಮವನ್ನು ಸಂಯೋಜಿಸಿ ನಿರ್ವಹಿಸಿದರು.
172 ಗಂಟೆ ಭರತನಾಟ್ಯದಲ್ಲಿ ವಿಶ್ವದಾಖಲೆ ಮಾಡಿದ ರೆಮೋನಾ ಎವೆಟ್ ಪಿರೇರಾ, ರಾಷ್ಟ್ರೀಯ ವೈದ್ಯ ಸಂಘಟನೆ ಡಾ. ಬಿ.ಸಿ. ರೋಯ್ ವೈಧಯಕೀಯ ಸಮಾಜ ಸೇವಾ ರಾಷ್ಟ್ರೀಯ ಪುರಸ್ಕಾರ ಪಡೆದ ರಾಜ್ಯದ ಕೆಲವೇ ವೈದ್ಯರಲ್ಲಿ ಒಬ್ಬರಾದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಅವರನ್ನು ಸನ್ಮಾನಿಸಲಾಯಿತು.
ಹೋಟೆಲ್ ಡಿಂಕಿ ಡೈನ್ ಮಾಲಕ ಸ್ವರ್ಣ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್, ಖ್ಯಾತ ರೇಡಿಯೋಲಾಜಿಸ್ಟ್ ಡಾ. ಪ್ರವೀಣ್ ಆಚಾರ್, ನೋವಾ ಐವಿಎಫ್ ಮಾರ್ಕೆಟಿಂಗ್ ಮೆನೇಜರ್ ಮಂಜುನಾಥ್ ಮತ್ತು ಹರ್ಷ ಪವಾರ್, ಕುಲಾಲ ಕುಂಬಾರ ಮಹಿಳಾ ಒಕ್ಕೂಟದ ಬಬಿತ, ಮಮತಾ ಹಾಗೂ ತಂಡದವರು, ಪಡೀಲ್ ವೀರ ನಗರ ನವಕೀರ್ತಿ ಯುವಕ ಮಂಡಲದ ಚರಣ್, ಪಡೀಲ್ ವೀರ ನಗರ ನವಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ವಿದ್ಯಾವತಿ, ಮಂಗಳೂರು ಕನ್ನಡ ಕಟ್ಟೆಯ ಸುರೇಶ್ ಆಚಾರ್ಯ, ಮಹಾಬಲ ಮಾಸ್ಟರ್, ಕುಲಾಲ ಯುವ ವೇದಿಕೆಯ ಸುಕುಮಾರ್ ಬಂಟ್ವಾಳ ಅನಿಲ್ ದಾಸ್ ಜಯಂತ್ ಸಂಕೋಲಿಗೆ ನವೀನ್ ಮಜಲ್ ಮುಂತಾದ ನಾಯಕರು ಹಾಗೂ ಅವರ ತಂಡ ಉಪಸ್ಥಿತರಿದ್ದರು.
ನೋವಾ ಫರ್ಟಿಲಿಟಿ ಸೆಂಟರ್ ಮೂಲಕ ಒಂದು ತಿಂಗಳ ಉಚಿತ ತಪಾಸಣೆ, ನೋಂದಾವಣಿ, ಪರೀಕ್ಷೆ ಸಹಿತ ಸಲಹೆ ಸಾಂತ್ವನ ಕ್ಕೆ ಸ್ಥಳದಲ್ಲೇ ಚಾಲನೆ ನೀಡಲಾಯಿತು.
ವಿನಯ ಕೃಷಿ ಬೆಳೆಗಾರರ ಬಳಗದ ಶ್ರೀ ವಿಜಯ ಶೆಟ್ಟಿ ಮೂಲ್ಕಿ ಹಾಗೂ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಮಮತಾ ಕುಲಾಲ್ ಹಾಗೂ ಅನನ್ಯ ಕುಲಾಲ್ ಕಾರ್ಯಕ್ರಮದ ಸಂಯೋಜನೆಯಲ್ಲಿ ಕೈ ಜೋಡಿಸಿದ್ದರು.
ಮಂಗಳೂರು ಕುಟುಂಬ ವೈದ್ಯರ ಸಂಘಟನೆ, ಪಡೀಲ್ ಕೊಡಕ್ಕಲ್ ಶಿವ ಫ್ರೆಂಡ್ಸ್ ಕ್ಲಬ್, ಪಡೀಲ್ ವೀರನಗರ ನವಕೀರ್ತಿ ಯುವಕ ಮಂಡಲ, ಕನ್ನಡ ಕಟ್ಟೆ ಮಂಗಳೂರು, ಕುಲಾಲ, ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಒಕ್ಕೂಟ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.