ಸೆ.29 ರಿಂದ ಅ.3 ವರೆಗೆ ಶಾರದೋತ್ಸವ ,ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ

ಸೆ.29 ರಿಂದ ಅ.3 ವರೆಗೆ ಶಾರದೋತ್ಸವ ,ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ


ಬಂಟ್ವಾಳ: ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ಕೃಪಾ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಶಾರದೋತ್ಸವ ಸಮಿತಿ ಬಂಟ್ವಾಳ ಇದರ ವತಿಯಿಂದ ೫೮ ನೇ ವರ್ಷದ ಶ್ರೀಶಾರದ ಮಹೋತ್ಸವವು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ವಠಾರದಲ್ಲಿ ವಿವಿಧ ವೈದಿಕ ಧಾರ್ಮಿಕ, ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ಸೆ.29 ರಿಂದ ಅ.3 ರವರೆಗೆ ನಡೆಯಲಿದೆ.

ಪ್ರತಿದಿನ ವಿವಿಧ ಆಹ್ವಾನಿತ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ, ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ತಮ,ನಾಟಕ ಕೊಂಕಣಿ,ತುಳು ನಾಟಕ ಪ್ರದರ್ಶನ, ಅ.2 ರಂದು ರಾತ್ರಿ 7.30 ಕ್ಕೆ ವಿಶೇಷ ದುರ್ಗಾ ಪೂಜೆ, ಅ.3 ರಂದು ರಾತ್ರಿ 10 ಗಂಟೆಗೆ ಶಾರದಾ ಮಾತೆಯ ಭವ್ಯ ಶೋಭಯಾತ್ರೆಯು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ:

ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯ ಪ್ರಯುಕ್ತ ಅ.೩ ರಂದು ಆಗಮಿಸುವ ಭಕ್ತಾದಿಗಳಿಗೆ ವಾಹನನಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಪಾಣೆಮಂಗಳೂರು, ಕಲ್ಲಡ್ಕ, ಮಂಗಳೂರು ಕಡೆಯಿಂದ ಬರುವವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಹಾಗೂ ದ್ವಿಚಕ್ರವಾಹನ ಸವಾರರು ಶ್ರೀ ದೇವಳದ ಸಮೀಪ ಇರುವ ಎಸ್‌ವಿಎಸ್ ದೇವಳದ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಿಲುಗಡೆಗೊಳಿಸುವಂತೆ ಕೋರಲಾಗಿದೆ.

ಮೂಡುಬಿದಿರೆ, ಸಿದ್ಧಕಟ್ಟೆ, ಬೈಪಾಸ್ ಕಡೆಯಿಂದ ಬರುವ ವಾಹನಗಳು ಬಂಟ್ವಾಳ ಪೇಟೆಗೆ ಬರುವ ದಾರಿಯಲ್ಲಿ ಕೊಟ್ರಮನಗಂಡಿಯ ಬಸ್ ನಿಲ್ದಾಣದ ಎದುರು ಇರುವ ವಿಶಾಲ ಮೈದಾನದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪುಂಜಾಲಕಟ್ಟೆ, ಗುರುವಾಯನಕೆರೆ, ಕಡೆಯಿಂದ ಬರುವ ಭಕ್ತಾದಿಗಳು ಜಕ್ರಿಬೆಟ್ಟಿನಿಂದ ಬಂಟ್ವಾಳ ಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಸರಸ್ವತಿ ನರ್ಸಿಂಗ್ ಹೋಮ್ ಇದರ ಮುಂದೆ ಇರುವ ಮೈದಾನದಲ್ಲಿ ನಿಲುಗಡೆಗೊಳಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅಂದು ಬಂಟ್ವಾಳ ಪೋಸ್ಟ್ ಆಫೀಸ್‌ನಿಂದ ಪೂರ್ಣಿಮಾ ಸ್ಟೋರ್ ಹಾಗೂ ಬೈಪಾಸ್ ರಸ್ತೆಯ ವರೆಗೆ ರಸ್ತೆಯ 2 ಬದಿಯಲ್ಲಿ ವಾಹನವನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದ್ದು, ದೇವಳದ ವತಿಯಿಂದ ಸೂಚಿಸಲಾದ ಸ್ಥಳದಲ್ಲಿಯೇ ತಮ್ಮ ವಾಹನವನ್ನು ನಿಲ್ಲಿಸಿ ಸಹಕರಿಸುವಂತೆ ಪ್ರಕಟಣೆ ಕೋರಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article