ತುಂಬೆ: ‘ಶ್ರೀ ಶಾರದಾ ಸಭಾ ಭವನ’ದ ಲೋಕಾರ್ಪಣೆ

ತುಂಬೆ: ‘ಶ್ರೀ ಶಾರದಾ ಸಭಾ ಭವನ’ದ ಲೋಕಾರ್ಪಣೆ


ಬಂಟ್ವಾಳ: ರಾ.ಹೆ.ಯ ತುಂಬೆ ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಮತ್ತು ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ವತಿಯಿಂದ ರಾ.ಹೆ.ಯ ತುಂಬೆ ರಾಮಲ್ ಕಟ್ಟೆಯಲ್ಲಿ ಸುಮಾರು 1.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ‘ಶ್ರೀ ಶಾರದಾ ಸಭಾ ಭವನ’ದ ಲೋಕಾರ್ಪಣಾ ಸಮಾರಂಭ ಭಾನುವಾರ ನೆರವೇರಿತು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಭಾಭವನವನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿ ಮಾತನಾಡಿ, ತುಂಬೆ ಶಾರದೋತ್ಸವಕ್ಕೆ 25 ವರ್ಷ ತುಂಬುತ್ತಿರುವುದು ಅಭಿನಂದನೀಯ. ಸಂಘಟನೆಗಳು ಹುಟ್ಟಿಕೊಳ್ಳುವಾಗ ತುಂಬಾ ಉತ್ಸಾಹ ಇರುತ್ತದೆ. ಆದರೆ ಬೆಳೆಯುತ್ತ ಹುಮ್ಮಸ್ಸು ಕಡಿಮೆಯಾಗುತ್ತದೆ. ಆದರೆ ತುಂಬೆಯ ಶಾರದೋತ್ಸವ ಸಮಿತಿಯ ಆರಂಭದ ಉತ್ಸಾಹ ಇನ್ನೂ ಉಳಿದಿದೆ. ಅದರ ಪರಿಣಾಮ ಇಂದು ಸುಂದರವಾದ ಸಭಾಭವನ ನಿರ್ಮಾಣಗೊಂಡಿದೆ ಎಂದು ಹೇಳಿದರು.

ಉದ್ಯಮಿ ಕೃಷ್ಣಪ್ರಸಾದ್ ಶೆಟ್ಟಿ ಪೇರ್ಲಬೈಲು ಯುಎಸ್‌ಎ ಅವರ ಸಹೋದರಿ ರೇಖಾ ಬಿ.ಆಳ್ವ ಅವರು ದೀಪ ಪ್ರಜ್ವಲನೆಗೈದು ‘ಶ್ರೀಶಾರದಾ ಸಭಾ ಭವನ’ದ ಉದ್ಘಾಟನೆಗೈದು ಶುಭಹಾರೈಸಿದರು.

ದ.ಕ. ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜಾತಿಯಧಾರದಲ್ಲಿ ಹಿಂದೂ ಸಮಾಜವನ್ನು ವಿಭಜಿಸುವ ಹುನ್ನಾರಗಳು ನಡೆಯುತ್ತಿದ್ದು, ಇಂತಹ ಸವಾಲುಗಳನ್ನು ಎದುರಿಸಲು ಹಿಂದೂ ಸಮಾಜ ಒಗ್ಗಾಟಾಗುವ ಅನಿವಾರ್ಯತೆ ಇದೆ.ಶಾರದೋತ್ಸವ ಸಹಿತ ವಿವಿಧ ಸಾರ್ವಜನಿಕ ಆಚರಣೆಗಳು ಹಿಂದೂ ಸಮಾಜದ ಒಗ್ಗಟ್ಟಿಗೆ ಸಹಕಾರಿಯಾಗಿದೆ ಎಂದರು.

ವಿ.ಪ.ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ವಿ.ಹಿಂ.ಪ.ನ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ರಾಜ್ಯ ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವತ್ತಬೈಲು, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಶಶಿಕುಮಾರ್ ಬಲ್ಯೊಟ್ಟು, ಮೈಸೂರು ಇಲೆಕ್ಟ್ರಿಕಲ್ ಕಂಪೆನಿ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಂಟ್ವಾಳ ತಾ.ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಉದ್ಯಮಿ ಅಜಿತ್ ಚೌಟ ದೇವಸ್ಯ ನೈಜೀರಿಯಾ, ಕೇಂದ್ರ ಸರಕಾರದ ನೊಂದಾಯಿತ ಮೌಲ್ಯಮಾಪಕರು ಮತ್ತು ಚಾರ್ಟೆಡ್೯ ಇಂಜಿನಿಯರ್ ಬಿ.ಎನ್. ರವೀಂದ್ರ, ಎಂ.ಎನ್. ಕನ್ಸ್ಟ್ರಕ್ಷನ್ಸ್‌ನ ಮಹಾಬಲ ಕೊಟ್ಟಾರಿ, ಮಂಗಳೂರು ಸ್ಕ್ತಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ತುಂಬೆ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ಸಮಿತಿ ಅಧ್ಯಕ್ಷ ದಿವಾಕರ ಪಂಬದಬೆಟ್ಟು, ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ, ಬ್ರಹ್ಮರಕೂಟ್ಟುಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಶಶಿಧರ ಬ್ರಹ್ಮರಕೂಟ್ಟು, ಗೋಪಾಲ ಮೈಂದಾನ್ ಶ್ರೀನಿಧಿ ತುಂಬೆ, ಉದ್ಯಮಿಗಳಾದ ಪ್ರಕಾಶ್ಚಂದ್ರ ರೈ, ಉಮೇಶ್ ಸಾಲಿಯಾನ್ ಬೆಂಜನಪದವು, ಸೀತಾರಾಮ ಎ.ಮುಳಿಹಿತ್ಲು ಮಂಗಳೂರು, ಬಿಜೆಪಿ ಹಿಂ.ವರ್ಗ ಮೋರ್ಛಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಪ್ರಿಯಾ ಸುನೀಲ್ ದರಿಬಾಗಿಲು, ಉದ್ಯಮಿಗಳಾದ ದಯಾನಂದ ರೈ, ಸೌರಭ ಶೆಟ್ಟಿ ಗುರ್ಮೆ ಕಾಪು, ಸಮಿತಿ ಕಾರ್ಯಾಧ್ಯಕ್ಷರಾದ ಜಯಪ್ರಕಾಶ್ ತುಂಬೆ, ಕುಮುದಾಕ್ಷ ತುಂಬೆ, ಜಗದೀಶ್ ಪೂಜಾರಿ ಕುಮ್ಡೇಲು, ರಾಮಚಂದ್ರ ಸುವರ್ಣ ತುಂಬೆ, ಉಮೇಶ್ ಶೆಟ್ಟಿ ಬರ್ಕೆ, ಶ್ರೀ ಶಾರದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪ್ರ.ಕಾರ್ಯದರ್ಶಿದಿವಾಕರ ಪೇರ್ಲಬೈಲು ತುಂಬೆ, ಶ್ರೀ ಶಾರದಾ ರಜತ ಮಹೋತ್ಸವ ಅಧ್ಯಕ್ಷ ರಾಘವ ಬಂಗೇರ, ಪ್ರ.ಕಾರ್ಯದರ್ಶಿ ಯೋಗೀಶ್ ಕೋಟ್ಯಾನ್ ಕುಮ್ಡೇಲು, ಕೋಶಾಧಿಕಾರಿ ವಿನೋದ್ ಬೊಳ್ಳಾರಿ, ಸಂಘಟನಾ ಕಾರ್ಯದರ್ಶಿಗಳು ವಿಜಯ್ ಕುಮಾರ್ ಕಜೆಕಂಡ, ಜಗದೀಶ್ ಕಡೆಗೋಳಿ ಉಪಸ್ಥಿತರಿದ್ದರು.

ಇದೇ ವೇಳೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಉದ್ಯಮಿ ಕೃಷ್ಣಪ್ರಸಾದ್ ಶೆಟ್ಟಿ ಪೇರ್ಲಬೈಲು ಯುಎಸ್‌ಎ ಅವರ ಸಹೋದರಿ ರೇಖಾ ಬಿ.ಆಳ್ವ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿಗಳಾದ ದಿ.ಸೀತರಾಮ ಬೆಳ್ಚಡ ಅವರ ಪರವಾಗಿ ಕುಟುಂಬದ ಸದಸ್ಯ ಕಮಾಲಾಕ್ಷ ಕೊಟ್ಟಿಂಜ, ದಿ.ಮೋನಪ್ಪ ಮೂಲ್ಯ ಅವರ ಪುತ್ರ ಹರೀಶ್ ಪೇರ್ಲಬೈಲು, ಶ್ರೀಶಾರದ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವ ಬಂಗೇರ ಪೇರ್ಲ ಬೈಲು, ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ, ಯಕ್ಷಗುರು ಉದ್ಯಾವರ ಪದ್ಮನಾಭ ಮಾಸ್ಟರ್, ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಸುನೀಲ್ ಅವರನ್ನು ಅಭಿನಂದಿಸಲಾಯಿತು.

ಶ್ರೀ ಶಾರದಾ ರಜತ ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಪ್ರಸ್ತಾವಿಸಿ, ಸ್ವಾಗತಿಸಿದರು. ಯೋಗೀಶ್ ಅಂಚನ್ ವಂದಿಸಿದರು. ಪೊಳಲಿ ತಂತ್ರಿಗಳಾದ ಗಿರಿಪ್ರಕಾಶ್ ತಂತ್ರಿ ಅವರ ನೇತೃತ್ವದಲ್ಲಿ ಸಭಾಭವನದಲ್ಲಿ ವೈಧಿಕ ವಿಧಿವಿಧಾನಗಳು ನೆರವೇರಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article