ಸೆ.29 ರಂದು ಪಿಲಿಕುಳ ಪ್ರವಾಸಿಗರಿಗೆ ಮುಕ್ತ
Sunday, September 28, 2025
ಮಂಗಳೂರು: ಶಾಲಾ ಮಕ್ಕಳ ದಸರಾ ರಜೆಯ ಪ್ರಯುಕ್ತ ಸೆ. 29ರಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಎಲ್ಲ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕೃತಿ ಗ್ರಾಮವು ವೀಕ್ಷಣೆಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.