ಜೆಪಿಟಿಯಲ್ಲಿ ಆಯುರ್ವೇದ ಮತ್ತು ಎನ್‌ಎಸ್‌ಎಸ್ ದಿನಾಚರಣೆ
ಸಂಸ್ಥೆಯ ಪ್ರಾಂಶುಪಾಲರಾದ ನರಸಿಂಹ ಭಟ್ ಎಚ್. ಅವರು ಸಭಾಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಆಯುರ್ವೇದದ ಮಹತ್ವವನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೆಸಿಐ ವಲಯ ತರಬೇತುದಾರರು, ಪತ್ರಕರ್ತರಾದ ಸಂದೀಪ್ ಸಾಲ್ಯಾನ್ ಎನ್‌ಎಸ್‌ಎಸ್ ಮಹತ್ವವನ್ನು ತಿಳಿಸಿದರಲ್ಲದೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾಹಿತಿಯನ್ನು ನೀಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಯವರಾದ ಭಾಸ್ಕರ್ ಎಲ್. ಮಾತನಾಡಿ, ಎನ್‌ಎಸ್‌ಎಸ್ ಮತ್ತು ಆಯುರ್ವೇದ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಭಗವಾನ್ ಪ್ರಸಾದ್, ಸಿವಿಲ್ ವಿಭಾಗ ಮುಖ್ಯಸ್ಥ ಮೋಹನ್ ರಾಜ್ ಜಿ.ಎಸ್., ಎಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಉದಯ್ ಕುಮಾರ್, ಕಚೇರಿ ಅಧೀಕ್ಷಕ ಸುಧಾಕರ್ ಸಿ.ಎಸ್. ಮತ್ತು ಕ್ರೀಡಾಧಿಕಾರಿ ರಿತಿಕಾ ಕೋಟ್ಯಾನ್ ಹೆಚ್., ಎನ್‌ಎಸ್‌ಎಸ್ ವಿದ್ಯಾರ್ಥಿ ನಾಯಕ ಸಿಂಚನ್ ಉಪಸ್ಥಿತರಿದ್ದರು.
ಸ್ವಯಂ ಸೇವಕ ವಿದ್ಯಾರ್ಥಿ ಸಿಂಚನ್ ಸ್ವಾಗತಿಸಿ, ಜಯಂತ್ ವಂದಿಸಿದರು. ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.