ಶ್ರೀಕೇತ್ರ ಕಾರಿಂಜದಲ್ಲಿ ಭಕ್ತರಿಗೆ ಮಧ್ಯಾಹ್ನದ ಅನ್ನದಾಸೋಹಕ್ಕೆ ಚಾಲನೆ
ಉದ್ಯಮಿ ರಘುನಾಥ ಸೋಮಯಾಜಿ ಅವರು ದೀಪ ಬೆಳೆಗಿಸುವ ಮೂಲಕ ಅನ್ನದಾಸೋಹಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ದೇವಳದ ಗಣಕೀಕರಣವನ್ನು ಉದ್ಘಾಟಿಸಿ ಮಾತನಾಡಿ, ತಾನು ಶಾಸಕ, ಸಚಿವನಾಗಿದ್ದ ಕಾಲದಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದರು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್ ಸಭಾಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಮಾಣಿ, ಕ್ಷೇತ್ರದ ಗ್ರಾಮಣಿ ಗಣೇಶ ಮುಚ್ಚಿನ್ನಾಯ, ಮಾಜಿ ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣಮಯ್ಯ, ಉದ್ಯಮಿ ಅಗರಿ ರಾಘವೇಂದ್ರ ರಾವ್, ನಿವೃತ್ತ ಡಿಡಿಪಿಐ ಶೇಷಶಯನ ಆಚಾರ್ಯ, ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಜಿನರಾಜ್ ಆರಿಗ, ವೆಂಕಟ್ರಮಣ ಮುಚ್ಚಿನ್ನಾಯ ಕಳ್ಳಿಮಾರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರೇಮನಾಥ್ ಪೀರ್ಯಗುತ್ತು, ಜನಾರ್ದನ ಆಚಾರ್ ಬಾಳ್ತಬೈಲ್, ಧನಲಕ್ಷ್ಮಿ ಸಿ. ಬಂಗೇರ, ರಾಧಾ ಆಚಾರ್, ಪ್ರಶಾಂತ್ ನಾಯ್ಕ್ ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ದಯಾನಂದ್ ಶೆಟ್ಟಿ ಅಮೈ ಪ್ರಸ್ತಾವಿಸಿ, ಸ್ವಾಗತಿದರು. ಉದಯ್ ನಾಯಕ್ ವಂದಿಸಿದರು. ಕೀರ್ತನಾ ವಿನಯ್ ಆಲಂಗಾರ್ ಕಾರ್ಯಕ್ರಮ ನಿರೂಪಿಸಿದರು.