ವಿಶ್ವ ತೆಂಗು ದಿನಾಚರಣೆ ಹಾಗೂ ಕೃಷಿ ಮಾಹಿತಿ ಕಾರ್ಯಕ್ರಮ
Wednesday, September 3, 2025
ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ, ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ, ಭಾರತೀಯ ಕೃಷಿ ಅಭಿವೃದ್ಧಿ ಪರಿಷತ್ತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಉಡುಪಿ ಜಿಲ್ಲೆ, ಪರಂಪರಾ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ (ರಿ)ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತೆಂಗು ದಿನಾಚರಣೆ ಪ್ರಯುಕ್ತ ವೈಜ್ಞಾನಿಕ ತೆಂಗು ಕೃಷಿ ತರಬೇತಿ ಕಾರ್ಯಕ್ರಮವು ಕಾರ್ಕಳ ಹೋಟೆಲ್ ಪ್ರಕಾಶ್‌ನ ಸಭಾಂಗಣದಲ್ಲಿ ನಡೆಯಿತು.
ಬ್ರಹ್ಮವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವಿಜ್ಞಾನಿ ಡಾ. ಧನಂಜಯ ತೆಂಗಿನ ಕೃಷಿಯ ಸಮಸ್ಯೆ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಭೂಮಿಕಾ ತೆಂಗಿನ ವಿಧಗಳು, ನಿರ್ವಹಣೆ, ಬಳಸಬೇಕಾದ ಗೊಬ್ಬರ, ಬರುವ ರೋಗಗಳು ಹಾಗೂ ಅದಕ್ಕೆ ಉಪಯೋಗಿಸಬೇಕಾದ ಔಷಧಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡಿ, ಹಿಂದೆ ಕೃಷಿ ಪ್ರಧಾನವಾಗಿದ್ದ ನಮ್ಮ ಜನರು ಅದರಿಂದ ವಿಮುಖರಾಗುತ್ತಿದ್ದರೂ ತಾಂತ್ರಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಯುವಕರು ಇತ್ತೀಚಿನ ದಿನಗಳಲ್ಲಿ ಕೃಷಿಯತ್ತ ವಾಲುತ್ತಿರುವುದು ಉತ್ತಮ ಬದಲಾವಣೆ ಎಂದರು.
ಪರಂಪರಾ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ನವೀನ್ ಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಭಯ್ ಇದ್ದರು.