ಸೆ.29-ಅ.2: ಶ್ರೀ ನಾರಾಯಣ ಗುರು ಯುವಕ ಮಂಡಲದ 48ನೇ ವರ್ಷದ ಕುಂದಾಪುರ ದಸರಾ ಮಹೋತ್ಸವ

ಸೆ.29-ಅ.2: ಶ್ರೀ ನಾರಾಯಣ ಗುರು ಯುವಕ ಮಂಡಲದ 48ನೇ ವರ್ಷದ ಕುಂದಾಪುರ ದಸರಾ ಮಹೋತ್ಸವ


ಕುಂದಾಪುರ: ಇಲ್ಲಿನ ನಾರಾಯಣ ಗುರು ಯುವಕ ಮಂಡಲ (ರಿ.) ಇವರ ವತಿಯಿಂದ ನಡೆಯುವ 48ನೇ ವರ್ಷದ ಕುಂದಾಪುರ ದಸರಾ ಮಹೋತ್ಸವವು ಸೆ.29 ರಿಂದ ಅ.2 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೇ.ಮೂ. ಕೋಟ ರಾಜಾರಾಮ ಸೋಮಯಾಜಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಸೆ.29 ರಂದು ಬೆಳಗ್ಗೆ 9.30ಕ್ಕೆ ಶ್ರೀ ಶಾರದಾ ದೇವಿಯ ವಿಗ್ರಹದ ಪ್ರಾಣ ಪ್ರತಿಷ್ಠೆ ಪೂಜೆ, ಪುಣ್ಯಾಹ, ಗಣಪತಿ ಪೂಜೆ, ಸಂಕಲ್ಪ, ಮಹಾ ಮಂಗಳಾರತಿ.11 ಗಂಟೆಗೆ ಗಣಹೋಮ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5.30ಕ್ಕೆ ಬಿಲ್ಲವ ಮಹಿಳಾ ಘಟಕದ ಸದಸ್ಯರಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ.

ಸೆ.30 ರಂದು ಬೆಳಗ್ಗೆ ಗಂಟೆ 9.30ಕ್ಕೆ “ಚಂಡಿಕಾ ಹೋಮ" ಮಧ್ಯಾಹ್ನ ಗಂಟೆ 12.30ಕ್ಕೆ "ಮಹಾಪೂಜೆ, ತೀರ್ಥ-ಪ್ರಸಾದ ವಿತರಣೆ ಬಳಿಕ 1 ಗಂಟೆಗೆ ಸಾರ್ವಜನಿಕ ಮಹಾ "ಅನ್ನ ಸಂತರ್ಪಣೆ" ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ  ಶ್ರೀ ನಾರಾಯಣಗುರು ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ವಿತರಣೆ, ಸಂಜೆ  6 ಗಂಟೆಗೆ ಶ್ರೀ ಸಿದ್ದಿವಿನಾಯಕ ಮಹಿಳಾ ಭಜನಾ ಮಂಡಳಿ, ಕುಂದಾಪುರ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅ.1 ರಂದು ಬೆಳಗ್ಗೆ 9.30ಕ್ಕೆ "ಶ್ರೀ ಸತ್ಯನಾರಾಯಣ ಪೂಜೆ" ಮಧ್ಯಾಹ್ನ 12.30ಕ್ಕೆ "ಮಹಾಪೂಜೆ, ಪ್ರಸಾದ ವಿತರಣೆ" ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿ ಮದ್ದುಗುಡ್ಡೆ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟಗೆ ಮಹಾಪೂಜೆ, ಪ್ರಸಾದ ವಿತರಣೆ.

ಅ.2 ರಂದು ಬೆಳಗ್ಗೆ 9 ಗಂಟಗೆ ಪ್ರಾತಃಕಾಲ ಪೂಜೆ, 11 ಗಂಟೆಯಿಂದ “ಲಲಿತಾ ಸಹಸ್ರನಾಮ ಪಾರಾಯಣ" ಮಧ್ಯಾಹ್ನ 12.30ಕ್ಕೆ "ಮಹಾಪೂಜೆ, ತೀರ್ಥ-ಪ್ರಸಾದ ವಿತರಣೆ" 3 ಗಂಟೆಗೆ ಶಾರದಾ ದೇವಿಯ ವಿಸರ್ಜನಾ ಪೂಜೆ, ಸಂಜೆ 6 ರಿಂದ ವೈಭವದ ಶ್ರೀ ಶಾರದೋತ್ಸವದ ಶೋಭಾ ಯಾತ್ರೆಯ ವಿವಿಧ ಟ್ಯಾಬ್ಲೊಗಳೊಂದಿಗೆ, ಪುರ ಮೆರವಣಿಗೆಯು ಕುಂದಾಪುರ ನಗರದಲ್ಲಿ ಸಂಚರಿಸಿ, ಪಂಚ ಗಂಗಾವಳಿ ನದಿಯಲ್ಲಿ ಶಾರದಾ ದೇವಿಯ ವಿಸರ್ಜನೆಯೊಂದಿಗೆ ಕುಂದಾಪುರ ದಸರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಶ್ರೀ ನಾರಾಯಣ ಗುರು ಯುವಕ ಮಂಡಲದ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article