ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ಗೆ ಪಿಡಿಒ ಇಲ್ಲ: ಅಭಿವೃದ್ಧಿ ಕುಂಠಿತ: ಗ್ರಾಮಸ್ಥರ ಆಕ್ರೋಶ
ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮೂರು ಗ್ರಾಮಗಳನ್ನೊಳಗೊಂಡ ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಇಲ್ಲದೇ ಪಂಚಾಯತ್ ಮೂಲಕ ನಡೆಯುವ ಸಾರ್ವಜನಿಕ ಕಾರ್ಯಗಳು ನೆನೆಗುದಿಗೆ ಬಿದ್ದಿವೆ ಎಂದು ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.
ಗ್ರಾಮ ಪಂಚಾಯತ್ ಮೂಲಕ ನಡೆಯುವ ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಪಿಡಿಓ ಸಹಿ, ಶಿಪಾರಸು ಅಗತ್ಯ. ಇಲ್ಲಿ ಆ ಹುದ್ದೆಯೇ ಖಾಲಿ ಇರುವುದರಿಂದ ಪಂಚಾಯತ್ನ ಸುಗಮ ಕಾರ್ಯಾಚರಣೆಗೆ ತಡೆಯುಂಟಾಗಿದೆ. ಇಷ್ಟು ದಿನ ಸಮೀಪದ ಕುಂಭಾಶಿ ಗ್ರಾಮ ಪಂಚಾಯತ್ ಪಿಡಿಓ ಹೊಂಬಾಡಿ-ಮಂಡಾಡಿ ಪಂಚಾಯತ್ನ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದರು. ಇದೀಗ ಅವರು ಕುಂಭಾಶಿಯಿಂದ ಬೇರೆಡೆಗೆ ವರ್ಗವಾಗಿದ್ದರಿಂದ ಹೊಂಬಾಡಿ-ಮಂಡಾಡಿ ಪಂಚಾಯತ್ಗೆ ಅಭಿವೃದ್ಧಿ ಅಧಿಕಾರಿಯೇ ಇಲ್ಲದಂತಾಗಿದೆ. ಸರ್ಕಾರದ ಈ ನಿರ್ಲಕ್ಷ್ಯದಿಂದ ಗ್ರಾಮಸ್ಥರು ತೊಂದರೆಗೊಳಗಾಗಿದ್ದಾರೆ. ಈ ವಿಳಂಬ ದೋರಣೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯಯತ್ ಅಭಿವೃದ್ಧಿ ಅಧಿಕಾರಿಗಳು ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಕಷ್ಟ ತೋಡಿಕೊಂಡ ಪಂಚಾಯತ್ ಸದಸ್ಯರು ತಕ್ಷಣ ಒಬ್ಬ ಸಮರ್ಥ ಪಿಡಿಓ ಅವರನ್ನು ಇಲ್ಲಿಗೆ ನೇಮಕ ಮಾಡಿ ಎಂದು ಆಗ್ರಹಿಸಿದ್ದಾರೆ.