ಸೆ.9 ರಂದು ‘ಹಿಮಾಲಯದ ಧ್ಯಾನಯೋಗ’

ಸೆ.9 ರಂದು ‘ಹಿಮಾಲಯದ ಧ್ಯಾನಯೋಗ’

ಮಂಗಳೂರು: ನಗರದ ಮಣ್ಣಗುಡ್ಡ ಸಂಘನಿಕೇತನದಲ್ಲಿ ಸೆ.9 ರಂದು ಸಂಜೆ 5ಕ್ಕೆ ‘ಹಿಮಾಲಯ ಧ್ಯಾನಯೋಗ’ದ ಸಂಸ್ಥಾಪಕ ಸದ್ಗುರು ಶ್ರೀ ಶಿವಕೃಪಾನಂದ ಸ್ವಾಮೀಜಿ ಅವರ ಮೊದಲ ಶಿಷ್ಯೆ ಪೂಜ್ಯ ಗುರುಮಾ ಅವರಿಂದ ‘ಉತ್ತಮ ಜೀವನ ನಿರ್ವಹಣೆಗಾಗಿ ಹಿಮಾಲಯದ ಧ್ಯಾನಯೋಗ’ ಎಂಬ ವಿಷಯದ ಕುರಿತು ಪ್ರವಚನ ಆಯೋಜಿಸಲಾಗಿದೆ.

ತಂತ್ರಜ್ಞಾನದ ಈ ಯುಗದಲ್ಲಿ, ನಮ್ಮ ಜೀವನದಲ್ಲಿ ಉದ್ಭವಿಸುವ ಅನೇಕ ಪ್ರಶ್ನೆಗಳಿಗೆ ಪರಿಹಾರಗಳನ್ನು ಈ ಕಾರ್ಯಕ್ರಮದಲ್ಲಿ ಕಾಣಬಹುದು. ಎಲ್ಲ ವಯಸ್ಸಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಮ್ಮ ದೈನಂದಿನ ಜೀವನದಲ್ಲಿ ‘ಹಿಮಾಲಯ ಧ್ಯಾನ ಯೋಗ’ ನಮಗೆ ಯಾವ ರೀತಿಯಲ್ಲಿ ಉಪಯುಕ್ತವಾಗಿದೆ ಎಂಬುದನ್ನು ಪೂಜ್ಯ ಗುರುಮಾ ತಿಳಿಸಿಕೊಡುವರು ಎಂದು ಕಾರ್ಯಕ್ರಮ ಸಂಘಟಕ ಚಂದ್ರಶೇಖರ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಿಮಾಲಯ ಧ್ಯಾನಯೋಗ’ದ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಧ್ಯಾನಕ್ಕೆ ಸೇರುವ ಮೂಲಕ ತಮ್ಮ ಸರ್ವತೋಮುಖ ಪ್ರಗತಿ ಸಾಽಸುತ್ತಿದ್ದಾರೆ. ‘ಹಿಮಾಲಯ ಧ್ಯಾನಯೋಗ’ದ ಸಂಸ್ಥಾಪಕ ಸದ್ಗುರು ಶ್ರೀ ಶಿವಕೃಪಾನಂದ ಸ್ವಾಮೀಜಿಯವರು ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು ಹಲವು ವರ್ಷಗಳಿಂದ ಹಿಮಾಲಯದಲ್ಲಿ ಧ್ಯಾನಸಾಧನೆ ಮಾಡಿದ್ದಾರೆ. ಕಳೆದ 25 ವರ್ಷಗಳಿಂದ ಅವರು ಸಮಾಜದಲ್ಲಿ ಹಿಮಾಲಯದ ಗಹನವಾದ ಜ್ಞಾನವನ್ನು ನಿರಂತರವಾಗಿ ಹಂಚಿಕೊಳ್ಳು ತ್ತಿದ್ದಾರೆ. ಹಿಮಾಲಯದಿಂದ ಜ್ಞಾನವನ್ನು ಪಡೆದ ನಂತರ ಮೊತ್ತಮೊದಲು ಅವರು ತಮ್ಮ ಪತ್ನಿ ಪೂಜ್ಯ ಗುರುಮಾ ಅವರಿಗೆ ಆ ಜ್ಞಾನದ ಆತ್ಮ ಸಾಕ್ಷಾತ್ಕಾರ ಮಾಡಿಸಿದ್ದಾರೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ಈ ಕಾರ್ಯಕ್ರಮದ ಲಾಭವನ್ನು ಎಲ್ಲರೂ ಪಡೆದುಕೊಳ್ಳಬಹುದು. ನೋಂದಣಿಗಾಗಿ  ಮೊಬೈಲ್ ಸಂಖ್ಯೆ 9480821999 ಸಂಪರ್ಕಿಸಬಹುದು. ಕಾರ್ಯಕ್ರಮ ಸಂಪೂರ್ಣ ಉಚಿತ ಎಂದರು.

ಸಂಘಟಕರಾದ ಮುಕುಂದ, ಕಾರ್ತಿಕ್, ಮಮತಾ ಚಂದ್ರಾನಿ, ಖುಷ್ಬು, ಬೀನಾ ಶುಕ್ಲಾ ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article