ಯುವತಿ ನಾಪತ್ತೆ
Thursday, September 25, 2025
ಮಂಗಳೂರು: ಜೋಕಟ್ಟೆ ಕೆಂಜಾರು ಗ್ರಾಮದ ಕಾಪಿಕಾಡು ಗುಡ್ಡೆ ಮನೆ ನಿವಾಸಿ ಟೀನಾ ಎಂಬವರು (23) ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಿಂದ ಹೋದವರು ಕಾಣೆಯಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆಃ ಎತ್ತರ 5 ಅಡಿ 1 ಇಂಚು, ಗೋಧಿ ಮೈ ಬಣ್ಣ, ಉದ್ದದ ಕಪ್ಪು ಕೂದಲು ಹೊಂದಿರುತ್ತಾರೆ. ಕೊಂಕಣಿ, ಇಂಗ್ಲೀಷ್, ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಬಜಪೆ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.