ಸೌಂದರ್ಯ ಸ್ಪರ್ಧೆ: ಅಕ್ಕ-ತಮ್ಮನ ಸಾಧನೆ
Thursday, September 11, 2025
ಮಂಗಳೂರು: ನಗರದ ಬಜಾಲ್‌ನ ಸಹೋದರ-ಸಹೋದರಿಯರು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. 11 ವರ್ಷ ಪ್ರಾಯದ ವಿಯಾ ಸಾಯಿ ಮತ್ತು 5 ವರ್ಷದ ಲಹರ್ ಸಾಯಿ ರಾಷ್ಟ್ರಮಟ್ಟದ ಮಿಸ್ ಅಂಡ್ ಮಿಸ್ಸೆಸ್ ಅಸ್ತ್ರಲ್ ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚಿದ್ದಾರೆ.
ಬೆಂಗಳೂರಿನ ಕಿಂಗ್ಸ್ ಮೆಡವ್ಸ್ ಹೋಟೆಲ್‌ನಲ್ಲಿ ಆಯೋಜಿಸಲಾದ ಪ್ರತಿಭಾ ಸಂಶಿಮಠ ಇವರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಮಿಸ್ ಅಂಡ್ ಮಿಸ್ಸೆಸ್ ಅಸ್ತ್ರಲ್ ಸೌಂದರ್ಯ ಸ್ಪರ್ಧೆಯಲ್ಲಿ ಲಿಟಲ್ ಮಿಸ್ಟರ್ ಇಂಡಿಯಾ ರನ್ನರ್ ಅಪ್ ಪ್ರಶಸ್ತಿಯನ್ನು ಲಹರಿ ಸಾಯಿ ಹಾಗೂ ಸಹೋದರಿ ವಿಯಾ ಸಾಯಿ ಜೂನಿಯರ್ ಮಿಸ್ ಇಂಡಿಯಾ ಅಸ್ತ್ರಲ್-2025 ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದು ಮಂಗಳೂರಿಗೆ ಕೀರ್ತಿ ತಂದಿದ್ದಾರೆ.
ಕಾರ್ಮೆಲ್ ಸಿಬಿಎಸ್‌ಸಿ ಸ್ಕೂಲ್ ಮಂಗಳೂರು ಇಲ್ಲಿನ ಯುಕೆಜಿಯ ವಿದ್ಯಾರ್ಥಿಯಾದ ಲಹರ್ ಸಾಯಿ ಹಾಗೂ ಆರನೇ ತರಗತಿಯಲ್ಲಿ ವಿಯಾ ಸಾಯಿ ಅವರು ಕಲಿಯುತ್ತಿದ್ದಾರೆ.
ಇವರಿಬ್ಬರು ದೀಪಕ್ ಗಂಗೂಲಿ ಅವರ ಪಾಥ್ವೇ ಮಾಡಲಿಂಗ್ ಇನ್ಸ್ಟಿಟ್ಯೂಟ್ ಮಂಗಳೂರು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ.