ಬಿಜೆಪಿಯ ಜನಾಂಗಿಯ ದ್ವೇಷದಿಂದ ನಾಡು ಅಭಿವೃದ್ಧಿಗೆ ಮಾರಕ: ಬೊಂಡಾಲ ಚಿತ್ತರಂಜನ್ ಶೆಟ್ಟಿ
Wednesday, September 3, 2025
ಮಂಗಳೂರು: ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿಗೆ ಭಾಜನರದ ಭಾನು ಮುಸ್ತಾಕ್ ಅವರನ್ನು ವಿರೋಧಿಸುವ ಬಿಜೆಪಿಗರಿಗೆ 2019ರಲ್ಲಿ ಎಸ್.ಎಲ್. ಭೈರಪ್ಪ ಅವರನ್ನು ಇದೇ ದಸರಾ ಹಬ್ಬಕ್ಕೆ ಕರೆದುಕೊಂಡು ಬಂದು ಉದ್ಘಾಟನೆ ಮಾಡಲಿಲ್ಲವೇ? ಎಸ್.ಎಲ್. ಭೈರಪ್ಪ ಅವರು ತಾನು ಬರೆದ ಉತ್ತರಕಾಂಡ ಪುಸ್ತಕದಲ್ಲಿ ‘ಶ್ರೀ ರಾಮನು ಕಾಡಿಗೆ ಹೋದದ್ದು ಸೀತೆಗೋಸ್ಕರ ಅಲ್ಲ, ತನ್ನ ರಾಜ್ಯ ವಿಸ್ತರಣೆಗೆ, ಅದರಿಂದ ರಾವಣನಲ್ಲಿ ಯುದ್ಧ ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದ’ ಎಂದು ಬರೆದುಕೊಂಡ್ಡಿದ್ದರು.
ಭೈರಪ್ಪ ಅವರಿಂದ ಹಿಂದೂ ಧರ್ಮಕ್ಕೆ ಅವಮಾನ ಆಗಲಿಲ್ಲವೇ? ಅವರನ್ನು ಯಾವ ಕಾರಣಕ್ಕೆ ವಿರೋಧಿಸಲಿಲ್ಲ?
ಮೈಸೂರು ಆಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮೈಲ್ ಅವರನ್ನು ಎರಡು ಬಾರಿ ದಸರಾ ಸಂದರ್ಭದಲ್ಲಿ ಆನೆಯ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದಾರೆ ಮೈಸೂರು ಮಹಾರಾಜರು, ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಬ್ದುಲ್ ಕಲಾಂ ಮತ್ತು ನಿಸಾರ್ ಅಹಮದ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಲ್ಲವೇ? ಬಿಜೆಪಿಯವರ ಈ ದ್ವಂದ್ವ ನಿಲುವು ಯಾಕೆ? ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಮಾಡಿದರೂ ನಡೆಯುತ್ತದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಸ್ಲಿಂ ವಿರೋಧಿ ಯಾಕೆ?
ಜನಾಂಗಿಯ ದ್ವೇಷ, ಈ ನಾಡಿನ ಅಭಿವೃದ್ಧಿಗೆ ಮಾರಕ ಆಗಿದೆ, ಇದನ್ನೆಲ್ಲಾ ಬಿಟ್ಟು ಸರ್ವ ಜನಾಂಗಿಯ ತೋಟದಲ್ಲಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ಬಿಜೆಪಿ ನಾಯಕರೇ ಇನ್ನಾದರೂ ಜೋತೆ ಜೊತೆಗೆ ಬದುಕಲು ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ಮುಖಂಡ ಬಂಟ್ವಾಳದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.