ರೋಹನ್ ಕಾರ್ಪೊರೇಶನ್ ಕಡಲ ಕಿನಾರೆಯಲ್ಲಿ ವಿಶ್ವ ದರ್ಜೆಯ ಅಲ್ಟ್ರಾ-ಲಕ್ಸುರಿ ಅಪಾರ್ಟ್‌ಮೆಂಟ್ ‘ರೋಹನ್ ಮರೀನಾ ಒನ್’
ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಈ ಯೋಜನೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಚಾಲನೆ ನೀಡಿ, ಈ ಕುರಿತಾದ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಿದರು.
ರೋಹನ್ ಮೋಂತೆರೊ ಅವರು ಆದಷ್ಟು ಬೇಗನೆ ಬೆಂಗಳೂರು, ಮುಂಬೈ ಮಹಾನಗರಗಳಲ್ಲೂ ಕಟ್ಟಡಗಳನ್ನು ನಿರ್ಮಿಸಿ ಛಾಪು ಮೂಡಿಸಲಿ ಎಂದು ಡಾ.ಎಂ.ಎನ್.ಆರ್. ಆಶಿಸಿದರು.
ದೇಶದಲ್ಲೇ ವಿನೂತನ ಪ್ರಯೋಗ:
ರೋಹನ್ ಕಾರ್ಪೊರೇಶನ್ ಸಂಸ್ಥಾಪಕ ಹಾಗೂ ಎಂ.ಡಿ. ರೋಹನ್ ಮೋಂತೆರೊ ಮಾತನಾಡಿ, ‘ರೋಹನ್ ಮರೀನಾ ಒನ್’ನಲ್ಲಿ ಭಾರತದಲ್ಲೇ ಮೊದಲ ಬಾರಿಗೆ, ಪ್ರತಿಯೊಂದು ಮನೆಯಿಂದಲೂ ಸಾಗರದ ಅಪೂರ್ವ ದೃಶ್ಯಗಳನ್ನು ಆಸ್ವಾದಿಸುವಂಥ ಐಷಾರಾಮಿ ಜೀವನವನ್ನು ಪಡೆಯಬಹುದಾಗಿದೆ. ಮನೆಗಳ ಒಳಭಾಗದ ವಿನ್ಯಾಸವೂ ಸಮುದ್ರದ ಸೌಂದರ್ಯಕ್ಕೆ ಕನ್ನಡಿ ಹಿಡಿದಂತೆ ರಚಿಸಲಾಗಿದೆ. ಭಾರತದ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಇದೊಂದು ವಿನೂತನ ಪ್ರಯೋಗ ಹಾಗೂ ಉತ್ಕೃಷ್ಟ ವಸತಿ ಯೋಜನೆಯಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬೈ, ಗೋವಾದಲ್ಲೂ ವಿಶಿಷ್ಟ ಶೈಲಿಯ ಕಟ್ಟಡ ನಿರ್ಮಾಣ ಯೋಜನೆಗಳನ್ನು ಮಾಡಲು ಮುನ್ನಡಿ ಇಟ್ಟಿದ್ದೇವೆ ಎಂದ ರೋಹನ್, ಮಂಗಳೂರು ನಗರ ಇನ್ನೂ ಬೆಳವಣಿಗೆ ಹೊಂದಬೇಕು. ಅದಕ್ಕೆ ಪೂರಕವಾಗಿ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿದ್ದೇವೆ ಎಂದರು.
ರೋಹನ್ ಮೋಂತೆರೊ ಅವರ ಪುತ್ರ ಡಿಯಾನ್ ಮೋಂತೆರೊ, ರೋಹನ್ ಕಾರ್ಪೊರೇಶನ್ ಜನರಲ್ ಮ್ಯಾನೇಜರ್ ಸುಮನಾ ಇದ್ದರು.
ರೋಹನ್ ಮರೀನಾ ಒನ್ ವೈಶಿಷ್ಟ್ಯತೆಗಳು:
ಸುರತ್ಕಲ್ ಎನ್‌ಐಟಿಕೆ ಬೀಚ್ ರಸ್ತೆಯಲ್ಲಿರುವ ರೋಹನ್ ಮರೀನಾ ಒನ್, ಒಟ್ಟು 8.2 ಎಕರೆ ವಿಸ್ತರಿಸಿದೆ. ಕಡಲ ತೀರದಲ್ಲಿ ಐಷಾರಾಮಿ ಜೀವನಶೈಲಿಯನ್ನು ನೀಡಬಲ್ಲ 433 ಅಲ್ಟ್ರಾ- ಲಕ್ಷುರಿ ಅಪಾರ್ಟ್ಮೆಂಟ್‌ಗಳನ್ನು ಹೊಂದಿದೆ. ಈ ಯೋಜನೆಯಲ್ಲಿ, 39 ಮಹಡಿಗಳಿರುವ “ದಿ ರಿಟ್ರೀಟ್” ಮತ್ತು 47 ಮಹಡಿಗಳಿರುವ “ದಿ ರಿಸಾರ್ಟ್” ಎಂಬ ಎರಡು ಟವರ್‌ಗಳು ಇರಲಿವೆ.
ಇದರಲ್ಲಿ 83 ಉತ್ಕೃಷ್ಟ ಗುಣಮಟ್ಟದ ಸೌಲಭ್ಯಗಳನ್ನು ನೀಡಲಾಗುತ್ತದೆ. ಆಕಾಶದೆತ್ತರದ ಬ್ಯಾಂಕ್ವೆಟ್ ಹಾಲ್‌ಗಳು, ಪಾರ್ಟಿ ಲೌಂಜ್‌ಗಳು, ಡಿಸ್ಕೊಥೆಕ್, ಫೈನ್-ಡೈನಿಂಗ್ ರೆಸ್ಟೋರೆಂಟ್‌ಗಳು, ಕೆಫೆ ಹಾಗೂ ಬಿಬಿಕ್ಯೂ ಡೆಕ್, ಇನ್ಫಿನಿಟಿ ಎಡ್ಜ್ ಸ್ವಿಮ್ಮಿಂಗ್ ಪೂಲ್, ಒಲಿಂಪಿಕ್ ಗಾತ್ರದ ಈಜುಕೊಳ, ವಾಟರ್ ಜೆಟ್, ಬಬಲ್ ಜೆಟ್‌ಗಳು ಮತ್ತು ವಿಶಿಷ್ಟವಾದ ತೇಲುವ ಪೆವಿಲಿಯನ್.
ಬ್ಯಾಡ್ಮಿಂಟನ್, ಸ್ಕ್ವಾಶ್ ಮತ್ತು ಟೆನಿಸ್ ಕೋರ್ಟ್‌ಗಳು, ವಿಶ್ವದರ್ಜೆಯ ಫಿಟ್ನೆಸ್ ಸೆಂಟರ್, ಮಿನಿ ಸಾಕರ್ ಮೈದಾನ ಮತ್ತು ಜಾಗಿಂಗ್ ಟ್ರ್ಯಾಕ್‌ಗಳು. ಮಾತ್ರವಲ್ಲದೆ ಯೋಗ ಡೆಕ್‌ಗಳು, ಧ್ಯಾನ ಕೊಠಡಿಗಳು, ಪ್ರತ್ಯೇಕ ಪುರುಷ ಮತ್ತು ಮಹಿಳಾ ಸ್ಪಾಗಳು ಇಲ್ಲಿವೆ.
ಮಕ್ಕಳ ಆಟದ ವಲಯಗಳು, ಪೆಟ್ಸ್ ಪಾರ್ಕ್, ವಿಡಿಯೋ ಗೇಮ್ ರೂಂ, ಪಿಕ್ನಿಕ್ ಲಾನ್ಸ್, ವೀಕ್ಷಣಾ ಡೆಕ್‌ಗಳು, ಎಂಟರ್‌ಟೈನ್‌ಮೆಂಟ್ ಡೆಕ್‌ಗಳು, ಡೋಮ್ ಪೆವಿಲಿಯನ್, ಪಾರ್ಟಿ ಲಾನ್ಸ್, ಗ್ಲಾಸ್‌ಹೌಸ್ ಇತ್ಯಾದಿಗಳು ಇರಲಿವೆ.
