ಮೀನುಗಾರಿಕೆಗೆ ತೆರಳಿದ ವ್ಯಕ್ತಿ ನಾಪತ್ತೆ
Tuesday, September 9, 2025
ಮಂಗಳೂರು: ಇರ್ಫಾನ್ ಮಾಲಕತ್ವದ ಮಿಖಾತ್ ಎಂಬ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಲೋಕನಾಥನ್ (55) ಮೀನುಗಾರಿಕೆಗೆಂದು ಸೆ.2 ರಂದು ದಕ್ಕೆಯಿಂದ ನಾಟಿಕಲ್ ದೂರದ ಸಮುದ್ರಕ್ಕೆ ತೆರಳಿದ್ದು, ಅದೇ ದಿನ ರಾತ್ರಿ ಮೀನಿಗೆ ಹಾಕಿದ್ದ ಬಲೆಯನ್ನು ತೆಗೆಯುವ ಸಮಯ ಅವರು ಕಾಣೆಯಾಗಿದ್ದು, ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತರ ಸುಮಾರು 5.2 ಅಡಿ, ಕಪ್ಪು ಮೈ ಬಣ್ಣ, ಸಪೂರ ಶರೀರ, ಕಪ್ಪು ತಲೆ ಕೂದಲು ಹೊಂದಿರುತ್ತಾರೆ. ಕಾಣೆಯಾದ ದಿನ ನೀಲಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಬರ್ಮುಡ ಧರಿಸಿದ್ದರು. ತಮಿಳು ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಗುರುತು ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾ ಪ್ರಕಟಣೆ ತಿಳಿಸಿದೆ.