ಬಲ್ಮಠ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ

ಬಲ್ಮಠ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ


ಮಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳಿಸಿ ಬಲ್ಮಠದ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ 12 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. 

ವಾಣಿಜ್ಯ ವಿಭಾಗದ ಮಾನ್ವಿಕಾ 600 ರಲ್ಲಿ 589 (98.16%), ಭ್ರಾಮರೀ ಎಸ್.ಪಿ. ಶೆಟ್ಟಿ 580 (96.66%), ರಿಶಿಕಾ 580 (96.66%), ಸ್ವಪ್ನ ವಿ 580 (96.66%), ಸ್ವಾತಿ 579 (96.5%), ಸುಮಿತ್ರ ಬಿ. 579 (96.5%), ಸಾನ್ವಿ ಎಸ್.ವಿ. 573(95.5%), ಕಲಾ ವಿಭಾಗದಲ್ಲಿ ಎಲಾಡ್ ಶೈಲಾ 583 (97.16%), ಅನನ್ಯ ಪಿ 574 (95.66%), ಭಾಗ್ಯಲಕ್ಷೀ ಎ. ಗುಜಮಾಗಡಿ 572(95.33%), ಭವ್ಯಶ್ರೀ 571 (95.16%), ವಿಜ್ಞಾನ ವಿಭಾಗದಲ್ಲಿ ಕವನ ಬಿ.ಸಿ. 570 (95%) ಅಂಕ ಗಳಿಸಿರುತ್ತಾರೆ.

ಪರೀಕ್ಷೆಗೆ 441 ವಿದ್ಯಾರ್ಥಿಗಳು ಹಾಜರಾಗಿದ್ದು 396 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ವಿಶಿಷ್ಠ ಶ್ರೇಣಿಯಲ್ಲಿ 94 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 221, ದ್ವಿತೀಯ ಶ್ರೇಣಿಯಲ್ಲಿ 64, ತೃತೀಯ ಶ್ರೇಣಿಯಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 89.8 ಫಲಿತಾಂಶ ಲಭಿಸಿರುತ್ತದೆ. ಕನ್ನಡ, ಹಿಂದಿ, ಸಂಸ್ಕೃತ, ಮನಃಶಾಸ್ತ್ರ, ಬ್ಯೂಟಿ & ವೆಲ್‌ನೆಸ್, ಐಟಿ, ವಿಷಯಗಳಲ್ಲಿ 100% ಫಲಿತಾಂಶ ಬಂದಿರುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article