ಪೊನ್ನೆಚ್ಚಾರಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ
Monday, September 29, 2025
ಮೂಡುಬಿದಿರೆ: ಇಲ್ಲಿನ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಎರಡು ದಿನ ನಡೆಯುವ ಮೂಡುಬಿದಿರೆ ದಸರಾ 2025-ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವದಂಗವಾಗಿ ಸೋಮವಾರ ಬೆಳಗ್ಗೆ ಗಣಹೋಮ, ಶಾರದೆಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು.
ದೇವಳದ ಆಡಳಿತ ಮೊಕ್ತೇಸರ ಎಂ.ಪಿ ಅಶೋಕ್ ಕಾಮತ್, ಪುರಸಭಾ ಸದಸ್ಯ ಸುರೇಶ್ ಪ್ರಭು ಮತ್ತು ಭಕ್ತ ವೃಂದದವರು ಈ ಸಂದಭ೯ದಲ್ಲಿದ್ದರು.
ಶಳ ಭಕ್ತಿಗೀತೆ ಸ್ಪರ್ಧೆ, ರಂಗಪೂಜೆ, ಗುಂಪು ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪಧೆ,ಭಜನೆ ನಡೆಯಿತು. ಸಾಯಂಕಾಲ ಎಂ.ಜೆ ಸ್ಟೆಪ್-ಅಪ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಕಾರ್ಯಕ್ರಮ, ಕಾಪು ರಂಗತರಂಗ ಕಲಾವಿದರಿಂದ`ಕುಟ್ಯಣ್ಣನ ಕುಟುಂಬ' ತುಳು ನಾಟಕ ಪ್ರದರ್ಶನಗೊಂಡಿತು.