ಬೆಳುವಾಯಿ ಯುವಶಕ್ತಿ ವಾಟ್ಸಾಪ್ ಬಳಗದ ವತಿಯಿಂದ ಉಚಿತ ಅಂಚೆ ಸೌಲಭ್ಯ ಮತ್ತು ಆರೋಗ್ಯ ತಪಾಸಣೆ
Wednesday, September 17, 2025
ಮೂಡುಬಿದಿರೆ: ಬೆಳುವಾಯಿ ಯುವಶಕ್ತಿ ವಾಟ್ಸಾಪ್ ಬಳಗದ ಹನ್ನೆರಡನೇ ವಾರ್ಷಿಕೋತ್ಸವ ದ ಅಂಗವಾಗಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ಆಧಾರ್ ಕಾರ್ಡ್ ನೊಂದಾವಣೆ, ತಿದ್ದುಪಡಿ, ಹಾಗೂ ಮಧುಮೇಹ, ಆರೋಗ್ಯ ತಪಾಸಣೆ ಕಾರ್ಯಕ್ರಮವು ಸಾರ್ವಜನಿಕವಾಗಿ ಉಚಿತವಾಗಿ ನೆರವೇರಿತು.
ಅಂಚೆ ಇಲಾಖೆಯ ಪುತ್ತೂರು ವಿಭಾಗದ ಮಾರ್ಕೆಟಿಂಗ್ ಎಕ್ಸ್ ಕ್ಯೂಟಿವ್ ಗುರುಪ್ರಸಾದ್ ಕೆ .ಎಸ್ ಕಾಯ೯ಕ್ರಮವನ್ನು ಉದ್ಘಾಟಿಸಿದರು. ಬೆಳುವಾಯಿಯ ಉದ್ಯಮಿ ನಿರಂಜನ್ ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದರು.
ಸಂಘಟಕ ಎಂ ದೇವಾನಂದ ಭಟ್, ಉದ್ಯಮಿ ಹರೀಶ್ ಬಂಗೇರ, ಡಾ. ಅಶ್ವಿನ್ ಕುಮಾರ್ ಜಿ.ಕೆ, ಶ್ರೀಮತಿ ರಂಝಿನಾ , ಯುವಶಕ್ತಿ ಬಳಗದ ಮುಖ್ಯಸ್ಥ ಸಂದೇಶ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಜುನಾಥ ಶೆಟ್ಟಿ, ಪ್ರವೀಣ್ ಭಂಡಾರಿ, ಕೆಸರುಗದ್ದೆ, ನಿತಿನ್ ಕುಮಾರ್ ಬೈಲಬರಿ, ಸುದರ್ಶನ್ ಆಚಾರ್ಯ ಕೊಳಕೆಬೈಲು, ಚಂದ್ರಹಾಸ ಜೈನ್ ಹಕ್ಕೇರಿ, ರವೀಂದ್ರ ಇರ್ವತ್ತೂರು, ಸುಕೇಶ್ ಶೆಟ್ಟಿ, ಸುಭಾಸ್ ಪೈ, ಅರವಿಂದ ಆಚಾರ್ಯ, ಲಕ್ಷ್ಮಣ ಸುವರ್ಣ, ಮಂಜುನಾಥ ಕಾಡುಮನೆ, ಶರಣಿತ್ ಭಂಡಾರಿ ಭಾಗವಹಿಸಿದ್ದರು.
ಕಾಂತಾವರ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.