ಶ್ರೀ ಮಹಾವೀರ ಕಾಲೇಜಿನಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಕೆ ಶ್ರೀಧರ ರಂಗನಾಥ ಪೈ ಕರ್ಯಕ್ರಮ ಉದ್ಘಾಟಿಸಿದರು.
ತೃತೀಯ ಬಿ.ಕಾಂ ಕುಶಾಗ್ರ ಎಸ್. ಪ್ರಭು ವಿನ್ಯಾಸಗೊಳಿಸಿದ ಲೋಗೋವನ್ನು ಅನಾವರಣ ಮಾಡುವ ಮೂಲಕ ಎಸ್ಎಂಸಿ ಕೋಡಿಂಗ್ ಮತ್ತು ಎಐ ಕ್ಲಬ್ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ರುಚ್ವಲ್ ರೂಪದ ಎಸ್ಎಂಸಿ ನಾಯಕತ್ವ ಉಪನ್ಯಾಸ ಸರಣಿಯ ಏಳನೇ ಕಾರ್ಯಕ್ರಮದಲ್ಲಿ ಸಿಂಗಾಪುರದ ಹೊಲಾಜಿಕ್ ಬಿಸಿನೆಸ್ ಡೈರೆಕ್ಟರ್ ಸುದೀಪ್ ಜೈನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಮಾಜಿ ಸಚಿವ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದರು.
ಎಂಐಟಿ ಮಣಿಪಾಲ ನಿದೇ೯ಶಕ ಡಾ. ಅನಿಲ್ ರಾಣಾ ಅತಿಥಿಗಳಾಗಿದ್ದರು. ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು.
ಮೈಂಡ್ಫುಲ್ ಕನ್ಸಲ್ಟಿಂಗ್ ಸಂಸ್ಥಾಪಕ, ಕಾಲೇಜಿನ ಹಳೆ ವಿದ್ಯಾಥಿ೯ ಸಂಜಯ್ ಭಟ್ ಕಾಲೇಜಿನ ಕೋಡಿಂಗ್ ಮತ್ತು ಎಐ ಕ್ಲಬ್, ಹಳೆ ವಿದ್ಯಾಥಿ೯ ಸಂಘದ ಸಹಯೋಗದಲ್ಲಿ ಸಂಯೋಜಿಸಿದ ಕಾಯ೯ಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಸ್ವಾಗತಿಸಿದರು. ತೃತೀಯ ಬಿ.ಕಾಂನ ಶ್ರೇಯಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ತೃತೀಯ ಬಿ.ಕಾಂ ಸಂಜನಾ ಕಾಯ೯ಕ್ರಮ ನಿರೂಪಿಸಿದರು.