ಭಾರತೀಯ ಮಜ್ದೂರು ಸಂಘದಿಂದ 'ರಾಷ್ಟ್ರೀಯ ಕಾಮಿ೯ಕ ದಿನ' ಆಚರಣೆ

ಭಾರತೀಯ ಮಜ್ದೂರು ಸಂಘದಿಂದ 'ರಾಷ್ಟ್ರೀಯ ಕಾಮಿ೯ಕ ದಿನ' ಆಚರಣೆ


ಮೂಡುಬಿದಿರೆ: ವಿಶ್ವಕರ್ಮ ಜಯಂತಿಯ ಪ್ರಯುಕ್ತ ಭಾರತೀಯ ಮಜ್ದೂರು ಸಂಘ ಮೂಡುಬಿದಿರೆ ತಾಲೂಕು ಸಮಿತಿಯ ವತಿಯಿಂದ 'ರಾಷ್ಟ್ರೀಯ ಕಾಮಿ೯ಕ ದಿನ'ವನ್ನು ಸಮಾಜ ಮಂದಿರಲ್ಲಿ ಬುಧವಾರ ಆಚರಿಸಲಾಯಿತು. 


ಬಿಎಂಎಸ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಭಗವಾನ್ ದಾಸ್ ಬೌದ್ಧಿಕ್ ನೀಡಿ ರಾಷ್ಟ್ರೀಯ ಚಿಂತನೆಯುಳ್ಳ ಸಂಘಟನೆಯಿದ್ದರೆ ಅದು ಭಾರತೀಯ ಮಜ್ಜೂರು ಸಂಘಟನೆ.  ನಾವು ಮೊದಲು ದೇಶದ ಹಿತ ನಂತರ ನಮ್ಮ ಹಿತವನ್ನು ಬಯಸುವುದರಿಂದ ವಿಶ್ವದಲ್ಲೇ ಅತ್ಯಂತ ಹೆಚ್ಚು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಎಂದ ಅವರು ಕಮ್ಯೂನಿಸ್ಟ್ ವಾದದವರು ಮೇ ಡೇಯಂದು ಕಾಮಿ೯ಕರ ದಿನವನ್ನು ಆಚರಿಸುತ್ತಾರೆ ಆದರೆ ನಿಜವಾದ ಕಾಮಿ೯ಕ ವಿಶ್ವಕಮ೯. ಆತನ ಜಯಂತಿಯಂದೇ ವಿಶ್ವದ ಕಾಮಿ೯ಕರೇ ವಿಶ್ವವನ್ನು ಒಗ್ಗೂಡಿಸಿ ಎಂಬ ಧ್ಯೇಯದೊಂದಿಗೆ ಕಾಮಿ೯ಕರ ದಿನವನ್ನು ಆಚರಿಸುವಂತ್ತಾಗಬೇಕು ಈ ನಿಟ್ಟಿನಲ್ಲಿ ಹೋರಾಟ ನಡೆಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. 


ಮೂಡುಬಿದಿರೆ ತಾಲೂಕು ಸಮಿತಿಯ ಅಧ್ಯಕ್ಷ ರಾಜೇಶ್ ಸುವಣ೯ ಅಧ್ಯಕ್ಷತೆ ವಹಿಸಿದ್ದರು. 


ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕಾರಿಣಿ ಸದಸ್ಯ ಚಂದ್ರಹಾಸ ಆಚಾಯ೯ ಅವರನ್ನು ಗೌರವಿಸಲಾಯಿತು.


ಮಜ್ದೂರು ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಕಾಡ೯ನ್ನು ವಿತರಿಸಲಾಯಿತು. 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪರ್ಯಾವರನ್ ಸಹ ಸಂಚಾಲಕರು ಮಂಜುನಾಥ ಶೆಟ್ಟಿ ಮಾತನಾಡಿ  ಕಾಮಿ೯ಕರು ನಮ್ಮನ್ನು ನಾವು ಮರೆತು ಕೆಲಸ ಮಾಡಬಾರದು. ವಾಹನಗಳನ್ನು ಚಲಾಯಿಸುವಾಗ ತಮ್ಮನ್ನು ನಂಬಿ ಕುಟುಂಬದವರಿದ್ದಾರೆ. ವಾಹನ ನೀಡಿದ ಮಾಲೀಕರಿದ್ದಾರೆ ಎಂಬುದನ್ನು ಅರಿತುಕೊಂಡು ಜವಾಬ್ದಾರಿಯಿಂದ ಚಲಾಯಿಸಬೇಕು ಹಾಗೂ ವಿಮೆಗಳನ್ನು ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 

ರುದ್ರಾಂಶ ಕನ್ಟ್ರಕ್ಷನ್ ನ ಅಜೇಯ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಐಬಿಎಂಎಸ್  ತಾಲೂಕು ಪ್ರಭಾರಿ ಪ್ರಮೋದ್ ರಾಜ್ ಪೆರಾಡಿ,  ಮೂಡುಬಿದಿರೆ. ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು, ಉಪಾಧ್ಯಕ್ಷರುಗಳಾದ ಜಯರಾಮ್ ರಾವ್, ಪದ್ಮನಾಭ ಇರುವೈಲು ಉಪಸ್ಥಿತರಿದ್ದರು.

ರಾಜೇಶ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article