ಎಕ್ಸಲೆಂಟ್ ಶಾಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ಸ್ಪರ್ಧೆ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಜರಗಿದ ಮೂಡುಬಿದಿರೆ ತಾಲೂಕು ಮಟ್ಟದ ವಿಜ್ಞಾನ ಸ್ಪರ್ಧೆಗಳು 2025 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಡುಬಿದಿರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್ ಮಾತನಾಡಿ, ಜೀವನದಲ್ಲಿ ವಿಜ್ಞಾನವು ಅವಿಭಾಜ್ಯ ಅಂಗವಾಗಿದೆ. ಬಾಲ್ಯದಿಂದಲೇ ಮಕ್ಕಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ವಹಿಸಿಕೊಂಡು ಸಮಾಜಕ್ಕೆ ವಿಶೇಷ ಕೊಡುಗೆಯನ್ನು ನೀಡುವಂತಾಗಬೇಕು ಎಂದರು.
ಡಯಟ್ ಉಪನ್ಯಾಸಕ ಶ್ರೀನಿವಾಸ ಅಡಿಗ, ಮೂಡುಬಿದಿರೆ ತಾಲೂಕು ಶಿಕ್ಷಣ ಸಂಯೋಜಕಿ ಸ್ಮಿತಾ ಮಿರಾಂಡ, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ, ಶಿವಪ್ರಸಾದ್ ಭಟ್, ತೀರ್ಪುಗಾರರಾದ ಪಶುಪತಿ ಶಾಸ್ತ್ರಿ, ದಿನೇಶ್ ಉಪಸ್ಥಿತರಿದ್ದರು.
ಉದ್ಘಾಟನಾ ಅಂಗವಾಗಿ ಎಕ್ಸಲೆಂಟ್, ಅಟಲ್ ವಿಭಾಗದವರು ಸೆನ್ಸಾರ್ ತಂತ್ರಜ್ಞಾನವನ್ನು ಉಪಯೋಗಿಸಿ, ದೀಪ ಪ್ರಜ್ವಲನೆ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.
ಸಸ್ಯ ಶ್ಯಾಮಲ ಯೋಜನೆಯ ಅಂಗವಾಗಿ ಸಸಿಗಳನ್ನಿತ್ತು ಗೌರವಿಸಲಾಯಿತು. ಶಿಕ್ಷಕ ಪ್ರಜ್ವಲ್ ಶೆಟ್ಟಿ ನಿರೂಪಿಸಿದರು. ಸಿ.ಆರ್.ಪಿ ಮಹೇಶ್ವರಿ ಇವರು ವಂದಿಸಿದರು.