ಮಂಡಲದ ವತಿಯಿಂದ ಕಡಂದಲೆ-ಪಾಲಡ್ಕ ಶಕ್ತಿ ಕೇಂದ್ರದ ಅಭ್ಯಾಸ ವಗ೯

ಮಂಡಲದ ವತಿಯಿಂದ ಕಡಂದಲೆ-ಪಾಲಡ್ಕ ಶಕ್ತಿ ಕೇಂದ್ರದ ಅಭ್ಯಾಸ ವಗ೯


ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲದ ವತಿಯಿಂದ ಕಡಂದಲೆ-ಪಾಲಡ್ಕ ಶಕ್ತಿಕೇಂದ್ರದ ಅಭ್ಯಾಸವರ್ಗವು ಕಡಂದಲೆ ಗಣೇಶದರ್ಶನ ಸಭಾಭವನದಲ್ಲಿ ಭಾನುವಾರ ಜರುಗಿತು.

ಬಿಜೆಪಿ ಶಿರ್ತಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸೋಮನಾಥ ಕೋಟ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಅವರು ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ಬಿಜೆಪಿಯ ಪಾತ್ರದ ಬಗ್ಗೆ  ಸಂವಾದ ನಡೆಸಿದರು.


ಚೆಳ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯನಂದ್ ಚೇಳ್ಯಾರ್ ಅವರು ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯ ಬಗ್ಗೆ  ಸವಿಸ್ತಾರವಾಗಿ ಮಾತನಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಅಳ್ವ ವಿಕಾಸಿತ ಭಾರತದ ಅಮೃತಕಾಲ ನಮ್ಮ ಭೂಮಿಕೆ ಕುರಿತು ಮಾತನಾಡಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ಬೂತ್ ಶಾ ಬೈಠಾಕ್ ನಡೆಸಿದರು.

ಸಮರೋಪ ಸಮಾರಂಭದಲ್ಲಿ ಪಕ್ಷದ ಪ್ರಮುಖರಾದ ಬೋಳ ವಿಶ್ವನಾಥ ಕಾಮತ್, ಬಿಜೆಪಿ ಪುತ್ತಿಗೆ ಮಹಾಶಕ್ತಿಕೇಂದ್ರ ಪ್ರಧಾನಕಾರ್ಯದರ್ಶಿ ಶಿವಕುಮಾರ್ ಶೆಟ್ಟಿ, ಪಾಲಡ್ಕ ಶಕ್ತಿಕೇಂದ್ರ ಪ್ರಮಖರಾದ  ಚಂದ್ರಶೇಖರ ಪೂಜಾರಿ ಕೇಮಾರು, ಕಡಂದಲೆ ಶಕ್ತಿಕೇಂದ್ರ ಪ್ರಮುಖರಾದ ಸಂತೋಷ ಭಂಡಾರಿ ಕಡಂದಲೆ ಪಕ್ಷದ ಮಂಡಲ ವಿವಿಧ ಜವಾಬ್ದಾರಿಯುತ ಪದಾಧಿಕಾರಿಗಳು, ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷ ಕಾರ್ಯದರ್ಶಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಭಾರತ ಮಾತೆ , ಪಂಡಿತ್ ದೀನದಯಾಳ್ ಉಪಾಧ್ಯಾಯ ಹಾಗು ಶ್ಯಾಮ್ ಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article