ಸಮಾಜಕ್ಕೆ ವಿಶ್ವಕಮ೯ರ ಕೊಡುಗೆ ಅಪಾರ: ಮಾಜಿ ಸಚಿವ ಅಭಯಚಂದ್ರ

ಸಮಾಜಕ್ಕೆ ವಿಶ್ವಕಮ೯ರ ಕೊಡುಗೆ ಅಪಾರ: ಮಾಜಿ ಸಚಿವ ಅಭಯಚಂದ್ರ

ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ


ಮೂಡುಬಿದಿರೆ: ಸ್ವರ್ಣ ತಯಾರಿಕೆ,  ಕಟ್ಟಡ ನಿರ್ಮಾಣ ಕೈಗಾರಿಕಾ ಕ್ಷೇತ್ರ ಹಾಗೂ ಶಿಲ್ಪಕಲೆಗಳ ಕೆತ್ತನೆಯ ಮೂಲಕ ವಿಶ್ವಕರ್ಮರು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. 

ಅವರು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ "ವಿಶ್ವಕರ್ಮ ಜಯಂತಿ" ಕಾಯ೯ಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿರುವ ಸಾವಿರ ಕಂಬದ ಬಸದಿ ನಿಮಾ೯ಣ ಹಾಗೂ ಶ್ರವಣ ಬೆಳಗೊಳದ ಬಾಹುಬಲಿ ಮೂರ್ತಿಯ ಕೆತ್ತನೆಯಲ್ಲಿಯೂ ವಿಶ್ವಕಮ೯ರ ಕೈ ಚಳಕವಿದೆ ಎಂದರು. 

ಮೂಡುಬಿದಿರೆ ತಾಲೂಕು ಕಾಯ೯ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅವರು ವಿಶ್ವಕರ್ಮ ಎಂಬುದು  ಯಾವುದೋ ಒಂದು ಸಮುದಾಯ ಅಥವಾ ಜನಾಂಗಕ್ಕೆ ಸೀಮಿತವಾದ ದೇವರಲ್ಲ. ಸಮಗ್ರವಾದ ಭಾರತೀಯ ಹಿಂದೂ ಸಂಸ್ಕ್ರತಿಯಲ್ಲಿ ವಿಶ್ವಕರ್ಮರಿಗೆ  ವಿಶಿಷ್ಠವಾದ ಸ್ಥಾನಮಾನವಿದೆ ಎಂದ ಅವರು ವಿಶ್ವಕರ್ಮ ಪೂಜೆ, ವಿಶ್ವಕರ್ಮ ಜಯಂತಿಯ ಹಿನ್ನೆಲೆಯನ್ನು ವಿವರಿಸಿದರು. 

ಪುರಸಭಾಧ್ಯಕ್ಷೆ ಜಯಶ್ರೀ ಕೇಶವ,ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ,ಪೊಲೀಸ್ ಉಪನಿರೀಕ್ಷಕ ನವೀನ್,  ಅತಿಥಿಗಳಾಗಿ ಭಾಗವಹಿಸಿದ್ದರು.

ಕಂದಾಯ ನಿರೀಕ್ಷಕ ಮಂಜುನಾಥ್ ಸಹಿತ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿಟಿ ರಾಮ್ ಅವರು ಸ್ವಾಗತಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article