ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗದ ವತಿಯಿಂದ ನಡೆದ ರಾಷ್ಟ್ರಮಟ್ಟದ ಫೆಸ್ಟ್ ‘ಫಾಕ್ಯುಲಾ 2025: ಸ್ಕ್ವಿಡ್ ಗೇಮ್’ ವಿದ್ಯಾರ್ಥಿಗಳ ಕ್ರಿಯಾಶೀಲತೆ, ನವೀನತೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳಗಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಬೆಂಗಳೂರಿನ ಬೇಕರ್ ಟಿಲ್ಲಿಯ ರಿಕ್ರೂಟಿಂಗ್ ಲೀಡ್‌ನ ರಾಧಿಕಾ ದೇವಯ್ಯ ಅವರು ಉದ್ಘಾಟಿಸಿ ಮಾತನಾಡಿ, ತಮ್ಮ ಸಂದೇಶದಲ್ಲಿ ಅವರು ನಿರ್ವಹಣಾ ಕೌಶಲ್ಯ, ಸೃಜನಶೀಲತೆ ಮತ್ತು ತಂಡಭಾವವು ಭವಿಷ್ಯದ ನಾಯಕರನ್ನು ರೂಪಿಸುವ ಪ್ರಮುಖ ಅಂಶಗಳೆಂದು ಹೇಳಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವ. ಡಾ. ಆಂಟೊನಿ ಪ್ರಕಾಶ್ ಮೊಂತೇರೋ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ಪೂರೈಸುವಂತಹ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತೀ ವಂದನೀಯ ಫಾ. ಲಾರೆನ್ಸ್ ಮಸ್ಕರೆನ್ಹಾಸ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನವೀನತೆ ಮತ್ತು ತಂಡಭಾವದ ಅಗತ್ಯತೆಯನ್ನು ಸವಾಲುಗಳನ್ನು ಸ್ವೀಕರಿಸಿ, ಧೈರ್ಯವಾಗಿ ಮುಂದುವರಿದು, ತಮ್ಮ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
‘ಸ್ಕ್ವಿಡ್ ಗೇಮ್’ ಅಡಿಯಲ್ಲಿ ಆಯೋಜಿಸಲಾದ ಹಲವು ನಿರ್ವಹಣಾ ಸ್ಪರ್ಧೆಗಳು ವಿದ್ಯಾರ್ಥಿಗಳ ತಂತ್ರಚಿಂತನೆ, ನಾಯಕತ್ವ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಅಳೆಯುವಂತಿದ್ದ, ಪ್ರತಿ ಹಂತವೂ ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಡೀನ್ ಡಾ. ರಾಧಾಕೃಷ್ಣ ಗೌಡ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕರಾದ ಮೊಹಮ್ಮದ್ ಅಫ್ನಾನ್ ವಂದಿಸಿದರು. ವಿದ್ಯಾರ್ಥಿನಿ ಪ್ರಿಯಾ ನಿರೂಪಿಸಿದರು.
‘ಫಾಕ್ಯುಲಾ 2025’ ಸಮಾರೋಪ ಸಮಾರಂಭ:ರಾಷ್ಟ್ರಮಟ್ಟದ ಫೆಸ್ಟ್ ‘ಫಾಕ್ಯುಲಾ 2025’ ಸಮಾರೋಪ ಸಮಾರಂಭವನ್ನು ಕಾಲೇಜಿನ ಪ್ರಾಂಶುಪಾಲರಾದ ವ. ಡಾ. ಆಂಟೊನಿ ಪ್ರಕಾಶ್ ಮೊಂತೇರೋ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರಿನ AMA Ceramics Pvt. Ltd. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ, ಕಾಲೇಜಿನ ಹಳೆಯ ವಿದ್ಯಾರ್ಥಿ ಆಗಿರುವ ಅಬ್ದ್ ಸಮದ್ ಪಿ.ಎ. ಭಾಗವಹಿಸಿ ಮಾತನಾಡಿ, ತಮ್ಮ ಉದ್ಯಮಶೀಲ ಜೀವನಯಾನವನ್ನು ಹಂಚಿಕೊಂಡ ಅವರು ವಿದ್ಯಾರ್ಥಿಗಳನ್ನು ದೃಢಸಂಕಲ್ಪದೊಂದಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಪ್ರೇರೇಪಿಸಿದರು.
ಸ್ಟಾಫ್ ಕಾರ್ಡಿನೇಟರ್ ಅಭಿಷೇಕ್ ಸುವರ್ಣ, ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರು ಸ್ವಾಗತಿಸಿ, ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಗೌಡ ವಿ. ಫೆಸ್ಟ್ನ ಉದ್ದೇಶ ಹಾಗೂ ಯಶಸ್ಸಿನ ಕುರಿತು ಬೆಳಕು ಚೆಲ್ಲಿದರು.
ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ವ. ಡಾ. ಆಂಟೊನಿ ಪ್ರಕಾಶ್ ಮೊಂತೇರೋ ಮಾತನಾಡಿ, ಭಾಗವಹಿಸಿದ ವಿದ್ಯಾರ್ಥಿಗಳ ತಂಡಭಾವವನ್ನು ಮೆಚ್ಚಿ, ತಮ್ಮ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
‘ಫಾಕ್ಯುಲಾ ಸ್ಕ್ವಿಡ್ ಗೇಮ್’ ಸ್ಪರ್ಧೆಯ ಫಲಿತಾಂಶ ಹುಬ್ಬಳ್ಳಿಯ KLECBA ಕಾಲೇಜು ವಿಜೇತರಾಗಿ ಹೊರಹೊಮ್ಮಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಮೀನಾ ಮುಫಿರಾ ನಿರೂಪಿಸಿದ್ದು, ವಿದ್ಯಾರ್ಥಿನಿ ಹಾಗೂ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷೆ ದೇಚಮ್ಮ ಎ.ಕೆ. ವಂದಿಸಿ, ನಿರೂಪಿಸಿದರು.