ಕುಕ್ಕೆ ಸುಬ್ರಹ್ಮಣ್ಯ ದೇವಳದ ಕಡತ ವಿಲೇವಾರಿ ವಿಳಂಬ ಶಿಕ್ಷಣ ಸಂಸ್ಥೆಗಳಿಗೆ ತೊಂದರೆ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ತೆಂಗಿನಕಾಯಿ ಟೆಂಡರ್ ಆಗಿ ಕೆಲವು ತಿಂಗಳು ಕಳೆದರೂ ಅದೇಶ ಪತ್ರ ಕೊಡದ ಹಿನ್ನೆಲೆ ತೆಂಗಿನಕಾಯಿ ಸರಬರಾಜು ಆಗುತ್ತಿಲ್ಲ. ಇದರಿಂದ ಈಗ ಜನತಾ ಬಜಾರಿನಿಂದ ತಾತ್ಕಾಲಿಕವಾಗಿ ಅಽಕ ಮೊತ್ತಕ್ಕೆ ಖರೀದಿ ನಡೆಯುತ್ತಿದೆ. ಇದರಿಂದ ಮುಂದೆ ತೆಂಗಿನಕಾಯಿ ಇಲ್ಲದೆ ಪೂಜೆಗಳು ನಿಲುಗಡೆಯಾಗಿ ಧಾರ್ಮಿಕ ನಂಬಿಕೆಗೆ ದಕ್ಕೆಯಾಗುವುದು ಮತ್ತು ದೇವಳದ ವಿದ್ಯಾಸಂಸ್ಥೆಯಲ್ಲಿರುವ ಹಲವು ಉಪನ್ಯಾಸಕರಿಗೆ 6 ತಿಂಗಳಿಂದ ವೇತನ ಪಾವತಿಯಾಗಿರುವುದಿಲ್ಲ ಹಾಗೂ ದೇವಳದ ವಾರ್ಷಿಕ ಬಜೆಟ್‌ನ ಹಲವಾರು ಕಡತ ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಕೊಳೆಯುತ್ತಾ ಇದ್ದು ಮಂಜೂರಾತಿಗೊಂಡಿರುವುದಿಲ್ಲ.
ಒಂದು ವರ್ಷದ ಬಜೆಟ್ ಮಂಜೂರಾತಿ ಮಾಡಿಕೊಂಡು ಖರ್ಚು ಮಾಡಬೇಕಾಗಿದ್ದರೂ ಈ ಕಾನೂನು ಪಾಲನೆಯಾಗುತ್ತಿಲ್ಲ. ಇದರಿಂದ ದೇವಳಕ್ಕೆ ಲಕ್ಷಾನುಗಟ್ಟಲೆ ನಷ್ಟ ಹಾಗು ಇತರ ತೊಂದರೆಗಳು ಆಗುತ್ತಿದೆ. ಆದುದರಿಂದ ತಾವು ಸಮಗ್ರ ಪರಿಶೀಲನೆ ನಡೆಸಿ ಸಂಬಂಸಿದ ಗುಮಾಸ್ತರು ಹಾಗೂ ಅಧಿಕಾರಿಗಳಿಗೆ ತಕ್ಷಣ ಕ್ರಮ ವಹಿಸಲು ಸೂಚನೆ ನೀಡುವಂತೆ ಅವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.