ಸುಳ್ಯ ದಸರಾ ಉತ್ಸವ: ಪೂರ್ವ ಭಾವಿ ಸಭೆ

ಸುಳ್ಯ ದಸರಾ ಉತ್ಸವ: ಪೂರ್ವ ಭಾವಿ ಸಭೆ


ಸುಳ್ಯ: ವಿಶ್ವ ವಿಖ್ಯಾತ ಮೈಸೂರು ದಸರಾ, ಮಡಿಕೇರಿ ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ಸುಳ್ಯ ದಸರಾ ನಡೆಯುವಂತಾಗಬೇಕು ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ಸುಳ್ಯ ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸುಳ್ಯ ದಸರಾ ಉತ್ಸವ ಸಮಿತಿ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ಶಾರದಾಂಬಾ ಸಮೂಹ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ  ಅಧ್ಯಕ್ಷತೆ ವಹಿಸಿ 54ನೇ ವರ್ಷದ ಸುಳ್ಯ ದಸರಾ 2025 ಸೆ.29ರಂದು ಪ್ರಾರಂಭಗೊಂಡು ಅ. 07ರ ವರೆಗೆ 9ದಿನಗಳ ಕಾಲ ನಡೆಯಲಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ದಸರಾ ಉತ್ಸವದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯಿತು.

ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಲೀಲಾಧರ್ ಡಿ.ವಿ, ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ. ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್ ಶಾರದಾಂಬ ಮಹಿಳಾ ಸಮಿತಿಯ ಅಧ್ಯಕ್ಷೆ  ಲತಾ ಮಧುಸೂಧನ್, ಗೌರವಾಧ್ಯಕ್ಷೆ ಡಾ. ಯಶೋಧಾ ರಾಮಚಂದ್ರ, ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಜಿ ಸುನಿಲ್ ಕೇರ್ಪಳ,  ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ ಕೆ ಸತೀಶ್, ಶಾರದಾಂಬಾ ಉತ್ಸವ ಸಮಿತಿಯ ಉಪಾಧ್ಯಕ್ಷ ಡಾ.ಉಜ್ವಲ್ ಯು.ಜೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿ ಬೆಳ್ಯಪ್ಪ ಗೌಡ, ಗೌರವ ಸಲಹೆಗಾರರಾದ  ಎಂ. ವೆಂಕಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಶಾರದಾಂಬ ಸಮೂಹ ಸಮಿತಿಗಳ ಎಲ್ಲಾ ಪದಾಧಿಕಾರಿಗಳಾದ ಹರೀಶ್ ಕಂಜಿಪಿಲಿ, ರಾಧಾಕೃಷ್ಣ ಬೊಳ್ಳೂರು, ಗಣೇಶ್ ಆಳ್ವ, ಶಿವನಾಥ ರಾವ್, ತೀರ್ಥರಾಮ ಜಾಲ್ಸೂರು, ಡಿ.ಎಸ್.ಗಿರೀಶ್, ಅನಿಲ್ ಕುಮಾರ್ ಕೆ.ಸಿ, ಅನೂಪ್ ಪೈ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಲೋಕೇಶ್ ಊರುಬೈಲು, ಜನಾರ್ಧನ ದೋಳ, ಪ್ರಸಾದ್ ಕಾಟೂರು, ವಿನಯ ಬೆದ್ರುಪಣೆ, ಶಿಲ್ಪಾ ಸುದೇವ್, ಜಿನ್ನಪ್ಪ ಪೂಜಾರಿ, ಚಂದ್ರಶೇಖರ ಪಂಡಿತ್, ಸತ್ಯಕುಮಾರ್ ಆಡಿಂಜ, ಲತೀಶ್ ಗುಂಡ್ಯ, ಕುಸುಮಾಧರ ಬೂಡು, ಸತ್ಯಕುಮಾರ್ ಆಡಿಂಜ, ಲತಾ ಬೂಡು, ಪ್ರದೀಪ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article