ಮಾಗಡಿ ಕನ್ನಡ ಪರ ಸಂಘಟನೆಗಳ ಸದಸ್ಯರ ಧರ್ಮಸ್ಥಳ ಭೇಟಿ

ಮಾಗಡಿ ಕನ್ನಡ ಪರ ಸಂಘಟನೆಗಳ ಸದಸ್ಯರ ಧರ್ಮಸ್ಥಳ ಭೇಟಿ


ಉಜಿರೆ: ರಾಮನಗರ ಜಿಲ್ಲೆಯ ಮಾಗಡಿ ನಗರ ‘ನಮ್ಮ ಕರ್ನಾಟಕ ನವನಿರ್ಮಾಣ ವೇದಿಕೆ’ಯ ನೇತೃತ್ವದಲ್ಲಿ ನೂರು ವಾಹನಗಳಲ್ಲಿ 500 ಮಂದಿ ಗುರುವಾರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರಿಗೆ ಗೌರವಾರ್ಪಣೆ ಮಾಡಿದರು.

ಧರ್ಮಸ್ಥಳದ ಬಗ್ಯೆ ಆದ ಅಪಪ್ರಚಾರ ಮತ್ತು ವದಂತಿಯನ್ನು ಖಂಡಿಸಿ, ಕ್ಷೇತ್ರದ ಪಾವಿತ್ರ್ಯ ರಕ್ಷಣೆಗೆ ತಾವೆಲ್ಲರೂ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೆಗ್ಗಡೆಯವರನ್ನು ಗೌರವಿಸಿ ಅವರ ಆಶೀರ್ವಾದ ಪಡೆದರು. ಬಳಿಕ ದೇವರದರ್ಶನ ಮಾಡಿ, ಪ್ರಸಾದ ಸ್ವೀಕರಿಸಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article