ಯಕ್ಷಾವಾಸ್ಯಮ್ ಕಾರಿಂಜ ಇದರ ಪಂಚಮ ವಾರ್ಷಿಕೋತ್ಸವ, ಭಾಗವತ ಕುರಿಯ ಗಣಪತಿ ಶಾಸ್ತ್ರಿಗೆ ಪ್ರಶಸ್ತಿ
ಸೋಮವಾರ ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಈ ಸಾಲಿನ ಯಕ್ಷಾವಾಸ್ಯಮ್ ಪ್ರಶಸ್ತಿ-25 ನ್ನು ಹಿರಿಯ ಯಕ್ಷಗಾನ ಭಾಗವತರಾದ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಎಲೆಮರೆ ಕಾಯಿಯಂತೆ ದುಡಿಯುವ ವಿವಿಧ ಕ್ಷೇತ್ರದ ಸಾಧಕರಾದ ಮಂಜಪ್ಪ ನಾಯ್ಕ್ (ಮೇಸ್ತ್ರೀ), ಬೊಮ್ಮಿ(ನಾಟಿ ವೈದ್ಯೆ), ಶಾರದಾ ಜಿ.ಬಂಗೇರ (ಜಾನಪದ) ಲೋಕಯ್ಯ ಗೌಡ (ಪತ್ರಿಕಾ ವಿತರಕ), ವಾಸುದೇವ ಪ್ರಭು(ಪಾಕತಜ್ಞ) ಅವರಿಗೆ ಯಕ್ಷಾವಾಸ್ಯಮ್ ಗೌರವ ಸಂಮಾನ ನಡೆಯಲಿದೆ ಎಂದರು.
ಬಳಿಕ ಪೂರ್ವರಂಗ, ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದ ಅವರು ಮಧ್ಯಾಹ್ನ 2.30 ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಅಧ್ಯಕ್ಷತೆಯಲ್ಲಿ ಸಭಾಪರ್ವ ನಡೆಯಲಿದ್ದು, ಕಲಾಪೋಷಕರು, ವೈದ್ಯರಾದ ಡಾ. ಭಾಸ್ಕರಾನಂದ ಕುಮಾರ್ ಮತ್ತು ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದಾರಲ್ಲದೆ ಹಲವಾರು ಗಣ್ಯರು ಉಪಸ್ಥಿರಿರುತ್ತಾರೆ.
ಇದೇ ವೇಳೆ ಯಕ್ಷಾವಾಸ್ಯಮ್ ಪ್ರಶಸ್ತಿ ಪ್ರದಾನ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರವನ್ನಿತ್ತು ಅಭಿನಂದಿಸಲಾಗುವುದು ಎಂದು ವಿವರಿಸಿದರು.
ಸಂಜೆ 4.30 ರಿಂದ ಸಂಸ್ಥೆಯಲ್ಲಿ ಹಿಮ್ಮೇಳ ಮತ್ತುಮುಮ್ಮೇಳದಲ್ಲಿ ತರಬೇತು ಪಡೆದ ವಿದ್ಯಾರ್ಥಿಗಳಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನದ ಪ್ರಸ್ತುತಗೊಳ್ಳಲಿದೆ ಎಂದು ಸಾಯಿಸುಮ ಎಂ. ನಾವಡ ತಿಳಿಸಿದರು.
2020ರಲ್ಲಿ ಸಂಸ್ಥೆಯು ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ವಾರ್ಷಿಕೋತ್ಸವ ನಡೆಸುತ್ತಿದ್ದೇವೆ. ಈ ವರ್ಷ 60ರಷ್ಟು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಕಾರಿಂಜ ಮತ್ತು ಬಂಟ್ವಾಳದಲ್ಲಿ ತರಗತಿಗಳು ನಡೆಯುತ್ತಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ದೇವದಾಸ ಶೆಟ್ಟಿ ಬಂಟ್ವಾಳ, ಲತಾ ಆರ್. ಮಾಣಿಬೆಟ್ಟು, ಜತೆ ಕಾರ್ಯದರ್ಶಿ ಸುಮನಾ ಯಳಚಿತ್ತಾಯ ಉಪಸ್ಥಿತರಿದ್ದರು.
