ಬ್ರಹ್ಮರಕೊಟ್ಲು ಟೋಲ್ ಬಳಿ ಬೈಕ್ಗೆ ಕಾರು ಢಿಕ್ಕಿ: ಸವಾರರು ಗಂಭೀರ
ವಿಟ್ಲ ಮೂಲದ ನಿವಾಸಿ, ಮಿಫ್ಸ್ ಸಂಸ್ಥೆಯ ವಿದ್ಯಾರ್ಥಿ ಮಿದ್ಲಾಜ್ ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ತಿಳಿದುಬಂದಿದೆ. ಬೈಕ್ನಲ್ಲಿದ್ದ ಸಹ ಸವಾರನು ಗಾಯಗೊಂಡಿದ್ದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯಿಂದ ರಾಷ್ಟ್ರಿಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬ್ರಹ್ಮರಕೂಟ್ಲು ಟೋಲ್ ತಪ್ಪಿಸುವ ನಿಟ್ಟಿನಲ್ಲಿ ತಲಪಾಡಿಯ ಸರ್ವಿಸ್ ರಸ್ತೆಗೆ ವಾಹನಗಳು ಏಕಾಏಕಿ ತಿರುವು ಪಡೆದಾಗ ಅವಘಡಗಳು ನಿರಂತರವಾಗಿ ಸಂಭವಿಸುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಅಪಘಾತವು ಇದೇ ಕಾರಣದಿಂದ ನಡೆದಿದೆಯೆನ್ನಲಾಗಿದೆ.
ಬಿ.ಸಿ.ರೋಡಿನಿಂದ ಮಂಗಳೂರಿಗೆ ತೆರಳಬೇಕಾದರೆ ಬ್ರಹ್ಮರಕೊಟ್ಲು ಟೋಲ್ ಬಳಿ ಸರ್ವಿಸ್ ರಸ್ತೆ ಬಲಭಾಗದಲ್ಲಿ ಮಾತ್ರ ಇದ್ದು, ವಾಹನಗಳು ಟೋಲ್ ತಪ್ಪಿಸಲು ಅಥವಾ ಆ ಭಾಗವದಲ್ಲಿರುವ ಮನೆಗಳ ಜನರು ವಾಹನವನ್ನು ಬಲಭಾಗಕ್ಕೆ ತಿರುವು ಪಡೆದುಕೊಳ್ಳುತ್ತಾರೆ. ಈ ಸಂದರ್ಭ ಮಂಗಳೂರಿನಿಂದ ಬಿ.ಸಿ.ರೋಡಿನತ್ತ ಅತೀ ವೇಗದಿಂದ ಬರುವ ವಾಹನಗಳು ಸ್ವಲ್ಪ ಯಾಮಾರಿದರೂ ಅವಘಡ ಸಂಭವಿಸುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
