ಅಶ್ವಿನಿ ಟಿ. ಅವರಿಗೆ ಪಿಎಚ್‌ಡಿ ಪದವಿ
Monday, October 27, 2025
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ವಿಭಾಗದಲ್ಲಿ ಅಶ್ವಿನಿ ಟಿ. ಅವರು ‘ಅಗ್ರೀಕಲ್ಚರ್ ಟ್ರಾನ್ಸಫರ್ಮೇಶನ್: ಎ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಶ್ರೀಪತಿ ಕಲ್ಲೂರಾಯ ಅವರು ಇವರಿಗೆ ಮಾರ್ಗದರ್ಶನ ನೀಡಿದ್ದರು. ಕಾಸರಗೋಡಿನ ತ್ರಿಕ್ಕನ್ನಾಡಿನ ಚಂದ್ರಶೇಖರ ಮತ್ತು ಸಾವಿತ್ರಿ ದಂಪತಿಗಳ ಪುತ್ರಿಯಾಗಿರುವ ಅಶ್ವಿನಿ ಅವರು, ಸೂರಜ್ ಅವರ ಧರ್ಮ ಪತ್ನಿ.