ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನಲ್ಲಿ ‘ಜಾಗೃತಿ ನಮ್ಮಒಟ್ಟೂ ಜವಾಬ್ದಾರಿ’: ಜಾಗೃತಿ ಅರಿವು ಸಪ್ತಾಹ-2025
ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್. ಗಂಗಣ್ಣವರ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.
ಪೊಲೀಸ್ ನಿರೀಕ್ಷಕ ಹಾಗೂ ಪ್ರಭಾರ ಉಪಾಧೀಕ್ಷಕ ಮಂಜುನಾಥ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿ, ವಿದ್ಯಾರ್ಥಿಗಳಲ್ಲಿ ಕಾನೂನು ಸಂವೇದನೆ ಬೆಳೆಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
ಭರತ್ ರಾಜ್ ಎಸ್. ನೇಜರ್ ಅತಿಥಿಗಳನ್ನು ಪರಿಚಯಿಸಿದರು.
ಮನು ಪಾಟೀಲ್ ಬಿ.ವೈ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾನೂನು ಸೇವೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು.
ಪ್ರಾಶುಪಾಲ ಡಾ. ರೊಬರ್ಟ್ ರೊಡ್ರಿಗಸ್ ಜೆ., ವಿದ್ಯಾರ್ಥಿಗಳಿಗೆ ಕಾನೂನು ಪಾಲನೆ ಮತ್ತು ಸಾಮಾಜಿಕ ನಿಷ್ಠೆಯ ಪ್ರತಿಜ್ಞೆ ಮಾಡಿಸಿದರು.
ಕಾಲೇಜಿನ ಸಂಚಾಲಕ ರೆ. ಫಾ. ಎಂ.ಸಿ. ಮಥಾಯಿ ಅಧ್ಯಕ್ಷತೆ ವಹಿಸಿ, ಯುವ ಪೀಳಿಗೆಯು ಕಾನೂನಿನ ಗೌರವ ಹಾಗೂ ನೈತಿಕತೆ ಪಾಲಿಸಬೇಕು ಎಂದು ಕರೆ ನೀಡಿ,ವಿದ್ಯಾರ್ಥಿ ಸಂವಾದ ನಡೆಸಿದರು.
ಕಾಲೇಜು ವಿಭಾಗ ಕಾರ್ಯದರ್ಶಿ ಆಲ್ವಾರಿಸ್ ಡಿಸಿಲ್ವಾ ಉಪಸ್ಥಿತರಿದ್ದರು.
ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯ್ಕ ಎಂ.ಎನ್. ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಲೋಕರಕ್ಷಾ ಪೊಲೀಸ್ ಇಲಾಖೆ ಹಾಗೂ ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ ಸಂಯುಕ್ತವಾಗಿ ಆಯೋಜಿಸಿದ್ದರು.