ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ವತಿಯಿಂದ ಹೊಸ ಬದುಕು ಆಶ್ರಮ ಸಾಲಿಗ್ರಾಮದಲ್ಲಿ ದೀಪಾವಳಿ ಆಚರಣೆ

ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ವತಿಯಿಂದ ಹೊಸ ಬದುಕು ಆಶ್ರಮ ಸಾಲಿಗ್ರಾಮದಲ್ಲಿ ದೀಪಾವಳಿ ಆಚರಣೆ


ಕುಂದಾಪುರ: ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ನೇತೃತ್ವದಲ್ಲಿ, ಹಸ್ತ ಚಿತ್ರ ಫೌಂಡೇಶನ್(ರಿ.) ಸಹಯೋಗದಲ್ಲಿ ದೀಪಾವಳಿ ಹಬ್ಬದ ಆಚರಣೆ ಪ್ರಯುಕ್ತ ಸೇವೆ, ಸಡಗರ ಹಾಗೂ ಸಮ್ಮಾನ ಕಾರ್ಯಕ್ರಮ ಸಾಲಿಗ್ರಾಮದ ಹೊಸ ಬದುಕು ಆಶ್ರಮದಲ್ಲಿ ಅ.19 ರಂದು ನಡೆಯಿತು.


ರಾಷ್ಟ್ರೀಯ ಮಾನವ ಹಕ್ಕು ಸಮಿತಿ, ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟದ ಅಧ್ಯಕ್ಷ ರಾಘವೇಂದ್ರ ಹರಪನಕೆರೆ, ಹಸ್ತ ಚಿತ್ರ ಫೌಂಡೇಶನ್ ಅಧ್ಯಕ್ಷೆ ಶರ್ಮಿಳಾ ಕಾರಂತ್, ಉದ್ಯಮಿ ಆದಿತ್ಯ ಕೋಟ, ಜೈ ಕುಂದಾಪ್ರ ಸೇವಾ ಟ್ರಸ್ಟ್ ನ ಹಿರಿಯರಾದ ಗಣೇಶ್ ಭಟ್, ಗೌರವ ಸಲಹೆಗಾರ ವಿವೇಕ್ ಜಿ. ಸುವರ್ಣ,‌ ಹಸ್ತ ಚಿತ್ತ ಫೌಂಡೇಶನ್ ಸದಸ್ಯರಾದ ಚಂದನ್ ಗೌಡ, ಕೃತಿಕಾ ಜೈ ಕುಂದಾಪ್ರ ಸೇವಾ ಸಂಸ್ಥೆಯ ಸದಸ್ಯರಾದ  ಸುಧೀರ್ ಕುಂದಾಪುರ, ಸಂತೋಷ್ ಮಣೂರು, ಸುಶಾಂತ್ ಬೈಂದೂರು, ಸಂತೋಷ್ ಪಡುಕರೆ, ಪ್ರವೀಣ್ ಪಡುಕರೆ, ಗಿರಿಜಾ ಸುವರ್ಣ, ಬೆಳಕು ಫೌಂಡೇಶನ್ ಅನಿರುದ್ಧ್, ಹೊಸ ಬದುಕು ಆಶ್ರಮದ ಸಂಸ್ಥಾಪಕ ವಿನಯ್ ಚಂದ್ರ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು.


ಇದೇ ವೇಳೆ ಆಶ್ರಮಕ್ಕೆ ಜೈ ಕುಂದಾಪ್ರ ಸೇವಾ ಟ್ರಸ್ಟ್ ಹಾಗೂ ಇನ್ನಿತರರಿಂದ ಧನ ಸಹಾಯ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರದೀಪ್‌ ಬಸ್ರೂರ್ ಅವರನ್ನು ಸಮ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಆಶ್ರಮದ ವಾಸಿಗಳಿಗೆ ಮನರಂಜನೆ ಸಲುವಾಗಿ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಿತು. ಗಾಯಕರಾದ ರವಿ ಬನ್ನಾಡಿ, ಭವ್ಯಾ ಕುಂದಾಪುರ, ಶಿವರಾಮ ಕೋಡಿ ಅವರು ಗಾಯನದ ಮೂಲಕ ರಂಜಿಸಿದರು. ಆಶ್ರಮದ ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡಿ, ಸಿಹಿತಿಂಡಿಗಳನ್ನು ವಿತರಿಸಲಾಯಿತು.

ಜೈ ಕುಂದಾಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಪುಂಡಲೀಕ ಮೊಗವೀರ್ ತೆಕ್ಕಟ್ಟೆ ಪ್ರಸ್ತಾವಿಸಿದರು. ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿ, ಜಯರಾಜ್ ಸಾಲಿಯಾನ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article