ಎಲ್ಪಿಸಿ ಆರೋಪಿಯ ಬಂಧನ
Friday, October 17, 2025
ಮಂಗಳೂರು: ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಲ್ಪಿಸಿ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಕಾವೂರಿನ ಮರಕಡದ ಜ್ಯೋತಿ ನಗರ ನಿವಾಸಿ ಧರ್ಮರಾಜ (60) ಎಂದು ಗುರುತಿಸಲಾಗಿದೆ.
ಆರೋಪಿಯೂ 2018 ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಆರೋಪಿಗೆ ನ್ಯಾಯಾಲಯವು ಎಲ್ಪಿಸಿ ವಾರೆಂಟನ್ನು ಹೊರಡಿಸಿದು, ಈ ಆರೋಪಿಯನ್ನು ಕಾವೂರು ಪೊಲೀಸ್ ಠಾಣೆಯ ಎಎಸ್ಐ ಚಂದ್ರಹಾಸ್ ಸನೀಲ್, ಹೆಚ್.ಸಿ ಬಾಲಕೃಷ್ಣ ಮತ್ತು ಪಿ.ಸಿ. ಚಂದ್ರಶೇಖರಪ್ಪ ಅವರು ಇಂದು ಮುಲ್ಕಿಯ ಪಕ್ಷಿಕರೆಯ ಕೆಂಬ್ರಾಳ್ ಎಂಬಲ್ಲಿ ಬಂಧಿಸಿ 1ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ಅ.29 ರ ವರೆಗೆ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದೆ.