ಉಡುಪಿ ಟಿಎಪಿಸಿಎಂಎಸ್ ಚುನಾವಣೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್ ಬಳಗದ ಅಭ್ಯರ್ಥಿಗಳು ಅವಿರೋಧ ಆಯ್ಕೆ

ಉಡುಪಿ ಟಿಎಪಿಸಿಎಂಎಸ್ ಚುನಾವಣೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್ ಬಳಗದ ಅಭ್ಯರ್ಥಿಗಳು ಅವಿರೋಧ ಆಯ್ಕೆ

ಮಂಗಳೂರು: ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ನಿ., (ಟಿಎಪಿಸಿಎಂಎಸ್) ಇದರ ಆಡಳಿತ ಮಂಡಳಿಯ 13 ಸ್ಥಾನಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಬಳಗದ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

‘ಎ’ ವರ್ಗದ ಸದಸ್ಯರಿಂದ ವೈ. ಸುಧೀರ್ ಕುಮಾರ್ ಅಧ್ಯಕ್ಷರು, ಪಡುಬಿದ್ರಿ ಸಹಕಾರ ವ್ಯವಸಾಯಿಕ ಸಂಘ, ಕೆ. ನಾರಾಯಣ ಬಲ್ಲಾಳ್ ಅಧ್ಯಕ್ಷರು, ಕೊಡವೂರು ವ್ಯವಸಾಯ ಸೇವಾ ಸಹಕಾರ ಸಂಘ, ಅಶೋಕ ಕುಮಾರ್ ಶೆಟ್ಟಿ ಅಧ್ಯಕ್ಷರು, ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ, ಶಿವಾಜಿ ಎಸ್. ಸುವರ್ಣ ಅಧ್ಯಕ್ಷರು, ಬೆಳ್ಳೆ ಸಹಕಾರ ವ್ಯವಸಾಯಿಕ ಸಂಘ, ಎಚ್. ಗಂಗಾಧರ ಶೆಟ್ಟಿ ಅಧ್ಯಕ್ಷರು, ಮಂದಾರ್ತಿ ಸೇವಾ ಸಹಕಾರ ಸಂಘ, ರಾಜೇಶ್ ಶೆಟ್ಟಿ ಬಿರ್ತಿ ಅಧ್ಯಕ್ಷರು, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘ, ಬಿ.ಸುರೇಶ್ ಅಡಿಗ ಅಧ್ಯಕ್ಷರು, ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ, ಜಿ. ತಿಮ್ಮ ಪೂಜಾರಿ ನಿರ್ದೇಶಕರು, ಕೋಟ ಸಹಕಾರಿ ವ್ಯವಸಾಯಕ ಸಂಘ, ಟಿ. ಸತೀಶ್ ಶೆಟ್ಟಿ ಅಧ್ಯಕ್ಷರು, ಗಣಪತಿ ಸಹಕಾರಿ ವ್ಯವಸಾಯಕ ಸಂಘ, ಬಿ. ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷರು, ರೈತರ ಸಹಕಾರಿ ಸಂಘ ಹಿರಿಯಡಕ, ಎನ್. ರಮೇಶ ಶೆಟ್ಟಿ ಅಧ್ಯಕ್ಷರು, ಉಪ್ಪರು ವ್ಯವಸಾಯ ಸೇವಾ ಸಹಕಾರಿ ಸಂಘ, ಹಾಗೂ ‘ಬಿ’ ವರ್ಗದ ಸದಸ್ಯರಿಂದ ರವಿರಾಜ ಹೆಗ್ಡೆ ಕೊಡವೂರು, ಶ್ರೀಧರ ವಿ. ಶೆಟ್ಟಿ ಉಡುಪಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆಗೊಂಡಿರುವ ಎಲ್ಲಾ ಅಭ್ಯರ್ಥಿಗಳಿಗೆ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಚುನಾವಣಾ ಪ್ರಕ್ರಿಯೆಯನ್ನು ಉಡುಪಿ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಜಯಂತಿ ಎಸ್. ಇವರು ನಡೆಸಿಕೊಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article