ಕೃಷಿ ವಿಚಾರ ವಿನಿಮಯ ಕೇಂದ್ರದ ಮಹಾಸಭೆ

ಕೃಷಿ ವಿಚಾರ ವಿನಿಮಯ ಕೇಂದ್ರದ ಮಹಾಸಭೆ


ಮೂಡುಬಿದಿರೆ: ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಇದರ 2024-25ರ ಸಾಲಿನ ವಾರ್ಷಿಕ ಮಹಾಸಭೆಯು  ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರಗಿತು.

ಕೇಂದ್ರದ ಅಧ್ಯಕ್ಷ ಅಭಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. 

ಮಾಜಿ ಅಧ್ಯಕ್ಷ ರಾಜವರ್ಮ ಬೈಲಗಡಿ ಅವರು ಮೂಡುಬಿದಿರೆಯಲ್ಲಿ ಸ್ಥಾಪನೆ ಯಾಗಲಿರುವ ಅನಾನಸು ಸಂಸ್ಕರಣ ಘಟಕ ನಿರ್ಮಾಣದ ಬಗ್ಗೆ ಇದರಿಂದ ಅನಾನಸು ಬೆಳೆಗಾರರಿಗೆ ದೊರೆಯಲಿರುವ ಕನಿಷ್ಠ ಲಾಭಾಂಶದ ಬಗ್ಗೆ ವಿವರಿಸಿದರು.


ತೆಂಗಿನ ಮರದಿಂದ ತೆಗೆದ ನೀರಾವನ್ನು ಕಲ್ಪರಸ ಎಂಬ ಪೇಯವನ್ನಾಗಿ ಮಾಡುವ ಸಂಸ್ಕರಣ ಘಟಕದ ಬಗ್ಗೆ ಅವರು ಮಾಹಿತಿ ನೀಡಿ ಅತ್ಯಧಿಕ ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಪೇಯವು ಆರೋಗ್ಯ ವರ್ಧನೆಗೆ ಉಪಯುಕ್ತವಾಗಿದೆ. ರೈತರಿಗೂ ಅತ್ಯಧಿಕ ಲಾಭ ತಂದುಕೊಡಲಿದೆ. ಇವೆರಡೂ ಸಂಸ್ಕರಣ ಘಟಕಗಳ ಕೂಡ ರೈತರಿಂದ ರೂಪುಗೊಳ್ಳುವ ಸಹಕಾರ ಸಂಘದ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿರುವುದಾಗಿಯೂ ತಿಳಿಸಿದರು.

ಕೃಷಿಕ ವಾಮನ ನಾಯಕ ಅವರು ಕಸಿ ಕಟ್ಟುವ ವಿಧಾನಗಳ ಬಗ್ಗೆ ವಿವರಣೆ ನೀಡಿದರು.

ಜತೆ ಕಾರ್ಯದರ್ಶಿ ದೀಪಕ್ ರಾವ್ ಕೊಳಕೆ ವಾರ್ಷಿಕ ವರದಿ, ಕೋಶಾಧಿಕಾರಿ ಲಿಡ್ಡಿನ್ ಡಿಕೋಸ್ತಾ ಲೆಕ್ಕಪತ್ರ ಮಂಡಿಸಿದರು.

ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸದಾನಂದ ನಾರಾವಿ ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article