ಕುಂದಾಪುರ ಟಿಎಪಿಸಿಎಂಎಸ್ ಚುನಾವಣೆ: ಡಾ. ಎಂ.ಎನ್.ರಾಜೇಂದ್ರ ಕುಮಾರ್ ಬಳಗದ ಅಭ್ಯರ್ಥಿಗಳು ಅವಿರೋಧ ಆಯ್ಕೆ
ಮಂಗಳೂರು: ಕುಂದಾಪುರ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ನಿ, (ಟಿಎಪಿಸಿಎಂಎಸ್) ಕುಂದಾಪುರ ಇದರ ಆಡಳಿತ ಮಂಡಳಿಯ 13 ಸ್ಥಾನಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ’ ಸಹಕಾರ ರತ್ನ ’ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಬಳಗದ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
’ಎ’ ವರ್ಗದ ಸದಸ್ಯರಿಂದ ಆನಂದ ಬಿಲ್ಲವ - ಗಂಗೊಳ್ಳಿ ಸೇವಾ ಸಹಕಾರಿ ಸಂಘ, ಉಮೇಶ್ ಶೆಟ್ಟಿ ಕಲ್ಲದ್ದೆ - ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘ, ಎ. ಕಿರಣ್ ಹೆಗ್ಡೆ - ಅಂಪಾರು ಸಹಕಾರಿ ವ್ಯವಸಾಯಿಕ ಸಂಘ, ಎಸ್ ಜಯರಾಮ ಶೆಟ್ಟಿ - ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ, ಪ್ರಭಾಕರ ಶೆಟ್ಟಿ - ವಂಡ್ಸೆ ಸಿ. ಎ. ಸಂಘ, ಪ್ರಭಾಕರ ಶೆಟ್ಟಿ - ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘ .ಎಂ ಮೋಹನ್ ದಾಸ್ ಶೆಟ್ಟಿ - ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ, ಸತೀಶ್ ಶೆಟ್ಟಿ ಕೆ - ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ, ಸದಾನಂದ ಮೊಗವೀರ - ಕಾವ್ರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ, ಶರತ್ ಕುಮಾರ ಶೆಟ್ಟಿ - ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘ, ಹೆಚ್ ಹರಿಪ್ರಸಾದ್ ಶೆಟ್ಟಿ - ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ’ಬಿ’ ವರ್ಗದ ಸದಸ್ಯರಿಂದ ರಕ್ಷಿತ್ ಶೆಟ್ಟಿ ಕೆ. ಕಾಳಾವಾರ, ಕೆ ವಿಜಯ್ ಕುಮಾರ್ ಕಂಡ್ಲೂರು ಇವರು ಆಯ್ಕೆಗೊಂಡಿದ್ದಾರೆ.
ಆಯ್ಕೆಗೊಂಡಿರುವ 13 ಅಭ್ಯರ್ಥಿಗಳಿಗೆ ’ಸಹಕಾರ ರತ್ನ ’ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಅಭಿವೃದ್ಧಿ ಅಧಿಕಾರಿ ಸುಮಿತ್ರಾ ಕುಮಾರಿ ಎನ್. ಎಸ್. ಇವರು ನಡೆಸಿಕೊಟ್ಟರು.