ಸಸಿಹಿತ್ಲು ಕಡಲ ತೀರದಲ್ಲಿ ಸ್ವಚ್ಛತೆ
ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನದ ದ.ಕ. ಜಿಲ್ಲಾ ಘಟಕದ ಸಹಯೋಗದಲ್ಲಿ ‘ವಿಶ್ವ ನದಿ-ಸಮುದ್ರ ದಿನ’ ಆಚರಣೆಯ ಅಂಗವಾಗಿ ಮತ್ತು ಕೇಂದ್ರ ಸರಕಾರದ ‘ಸ್ವಚ್ಚತಾ ಹಿ ಸೇವಾ’ಅಭಿಯಾನದ ಭಾಗವಾಗಿ ಈ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅಧ್ಯಕ್ಷ ಪ್ರೊ. ವಾಮನ ಇಡ್ಯ ಪ್ರೇರಣಾಪ್ರದ ಮಾತುಗಳನ್ನಾಡಿದರು.
ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಸ್ವಾಗತಿಸಿದರು.
ಅಖಿಲ ಭಾರತ ವಿದ್ಯಾಭಾರತಿಯ ಪ್ರಾಂತ ಸ್ತರದ ಅಧಿಕಾರಿ ಸುರೇಶ್ ಮರುಳಾರಾಧ್ಯಸ್ವಾಮಿ, ಶಾರದಾ ವಿದ್ಯಾಲಯದ ಎನ್.ಸಿ.ಸಿ. ಅಧಿಕಾರಿ ರತ್ನಾಕರ್, ಸ್ಕೌಟ್ ಮಾಸ್ಟರ್ ವೇಲ್ರಾಜ್, ಸಸಿಹಿತ್ಲುವಿನ ಸ್ಥಳೀಯ ಕಲಾವಿದ ಪ್ರದೀಪ್ ಉಪಸ್ಥಿತರಿದ್ದರು. ಶಾರದಾ ವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿಗಳ, ಕೆಡೆಟ್ಗಳ ಮತ್ತು ಸ್ಕೌಟ್ಸ್-ಗೈಡ್ಸ್ ಸದಸ್ಯರ ಈ ಸಾಮಾಜಿಕ ಚಟುವಟಿಕೆಯ ಕಾರ್ಯಕ್ರಮವು ಪರಿಸರ ಶುದ್ಧತೆಯ ಜೊತೆಗೆ ಜನರಲ್ಲಿ ಸ್ವಚ್ಚತೆಯ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿ ನೆರವೇರಿತು.