ಪುರಸಭಾ ವ್ಯಾಪ್ತಿಯ ವಿವಿಧ 32 ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೋಟ್ಯಾನ್ ಶಿಲಾನ್ಯಾಸ
Tuesday, October 28, 2025
ಮೂಡುಬಿದಿರೆ: 2025-26ನೇ ಸಾಲಿನ ಪುರಸಭಾ ನಿಧಿಯಿಂದ 2.77 ಕೋ. ವೆಚ್ಚದಲ್ಲಿ ನಡೆಯಲಿರುವ 32 ವಿವಿಧ ಕಾಮಗಾರಿಗಳಿಗೆ ಶಾಸಕ ಉಮಾನಾಥ ಎ. ಕೋಟ್ಯಾನ್ ಮಾರೂರಿನಲ್ಲಿ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು ಪುರಸಭಾ ವ್ಯಾಪ್ತಿಯ ಬೇರೆ ಬೇರೆ ವಾಡ್೯ಗಳಲ್ಲಿ ಮೂಲಭೂತ ಸೌಕಯ೯ಗಳಿಗೆ ಅನುದಾನವನ್ನು ಜೋಡಿಸಿಕೊಂಡು ಕಾಮಗಾರಿಗಳನ್ನು ಆರಂಭಿಸಲಾಗಿದೆ. ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಬಸ್ ನಿಲ್ದಾಣ, ಚರಂಡಿ, ರಸ್ತೆಗಳಿಗೆ ಒಂದೇ ಕಡೆಯಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂದ ಅವರು ಪುರಸಭಾ ವ್ಯಾಪ್ತಿಯಲ್ಲಿ ರಸ್ತೆಗಳು ತೀರ ಹಾಳಾಗಿದ್ದು ಇದನ್ನು ಆದಷ್ಟು ಶೀಘ್ರದಲ್ಲಿ ದುರಸ್ಥಿ ಮಾಡಲಾಗುವುದೆಂದು ತಿಳಿಸಿದರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ವಾಡ್೯ ಸದಸ್ಯೆ ಕುಶಾಲ, ನಾಮ ನಿದೇ೯ಶಿತ ಸದಸ್ಯೆ ಸರಸ್ವತಿ, ಸದಸ್ಯರಾದ ದಿವ್ಯಾ ಜಗದೀಶ್, ಸೌಮ್ಯ ಶೆಟ್ಟಿ, ಧನಲಕ್ಷ್ಮೀ, ಮಾಜಿ ಸದಸ್ಯ ದಿನೇಶ್ ಮಾರೂರು, ಮುಖ್ಯಾಧಿಕಾರಿ ಇಂದು ಎಂ., ಎಂಜಿನಿಯರ್ ನಳಿನ್ ಕುಮಾರ್ ಪಿ, ಕಂದಾಯ ಅಧಿಕಾರಿ ಜ್ಯೋತಿ ಹೆಚ್, ಹಿರಿಯರು ಮತ್ತು ಗ್ರಾಮಸ್ಥರು ಈ ಸಂದಭ೯ದಲ್ಲಿದ್ದರು.