ಶಿರ್ತಾಡಿಯಲ್ಲಿ ಸೋಮನಾಥ ಶಾಂತಿ ಸಹಿತ ಮೂವರಿಗೆ ಗುರುವಂದನೆ, ಸಾಧಕರಿಗೆ ಸನ್ಮಾನ

ಶಿರ್ತಾಡಿಯಲ್ಲಿ ಸೋಮನಾಥ ಶಾಂತಿ ಸಹಿತ ಮೂವರಿಗೆ ಗುರುವಂದನೆ, ಸಾಧಕರಿಗೆ ಸನ್ಮಾನ


ಮೂಡುಬಿದಿರೆ: ಶ್ರೀ ನಾರಾಯಣ ಗುರು ವೈದಿಕ ಸಮಿತಿ (ರಿ) ಮಂಗಳೂರು, ಕರ್ನಾಟಕ ಇದರ ವತಿಯಿಂದ ವೈದಿಕ ಸಮಿತಿಯ 2024-25 ನೇ ಸಾಲಿನ ಗುರುವಂದನಾ ಕಾರ್ಯಕ್ರಮ ಶಿರ್ತಾಡಿ ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದಲ್ಲಿ ಜರಗಿತು.


ಗುರುವಂದನೆ: ಶಿರ್ತಾಡಿ ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ವತಿಯಿಂದ ಸಂಘದ ಕುಲಪುರೋಹಿತರಾದ ಶ್ರೀ ಕ್ಷೇತ್ರ ಕಂದೀರು ದೇವಸ್ಥಾನದ ಆಡಳಿತ ಮೊಕ್ತೇಸರಾದ ಸೋಮನಾಥ ಶಾಂತಿ, ಶಿವಾನಂದ ಶಾಂತಿ ತಾಕೊಡೆ,  ಲಕ್ಷ್ಮೀನಾರಾಯಣ ಶಾಂತಿ ನಿಟ್ಟೆ, ಇವರುಗಳಿಗೆ ವೈದಿಕ ಸಮಿತಿಯ ವತಿಯಿಂದ ಗುರುವಂದನೆಯನ್ನು ಸಲ್ಲಿಸಲಾಯಿತು. 


ಅಭಿನಂದನೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಾಂತಿಗಳಾದ ನಾಗಪಾತ್ರಿ ಮನೋಜ್ ಶಾಂತಿ ಕಾವೂರು, ಗಣೇಶ ಶಾಂತಿ ಮುಡುಕೂಡಿ (ಕಂಬಳ ಕ್ಷೇತ್ರ), ರಾಜೇಶ್ ಶಾಂತಿ ಪುಂಜಾಲ್ ಕಟ್ಟೆ (ಮಂಡಲ ರಚನೆಕಾರರು), ನವೀನ್ ಶಾಂತಿ ಅಡ್ಯಾರು (ಕಲಾಕ್ಷೇತ್ರ) ಇವರನ್ನು ಅಭಿನಂದಿಸಲಾಯಿತು. ಮತ್ತು ಬಿಲ್ಲವ ಸಮಾಜದ ಕುಲ ಪುರೋಹಿತರಾದ ಶಾಂತಿಗಳಿಗೆ ವೈದಿಕ ಕ್ಷೇತ್ರದಲ್ಲಿ ಸಂಪೂರ್ಣ ಸಹಕಾರ ನೀಡಿದ  ವಾಸು ಪೂಜಾರಿ ಮಡ್ಲಮನೆ ಮರೋಡಿ,  ನೊಣಯ್ಯ ಪೂಜಾರಿ ಹಳೆ ಮನೆ ಮೂಡು ಮಾರ್ನಾಡು,  ಮೋಹನ್ ಪೂಜಾರಿ ಬಂಗಾರ್ ಗುಡ್ಡೆ ಕುದ್ರಿ ಪದವು,  ಸದಾನಂದ ಕೆ ಸುವರ್ಣ ತೋಡಾರು,  ಜಾರಪ್ಪ ಪೂಜಾರಿ ಅವರ ಪರವಾಗಿ ಅವರ ಪತ್ನಿ  ನೀಲಮ್ಮ ಪೂಜಾರ್ತಿ ಜೆಎನ್ಎಸ್ ಇವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.

ಸಮಿತಿಯ ಅಧ್ಯಕ್ಷ ಹರೀಶ್ ಶಾಂತಿ ಪುತ್ತೂರು ಅಧ್ಯಕ್ಷತೆಯನ್ನು ವಹಿಸಿದ್ದರು. 

ಕಣಿಯೂರು ಶ್ರೀ ಮಹಾಬಲೇಶ್ವರ ತೀರ್ಥ ಸ್ವಾಮೀಜಿ  ಆಶೀರ್ವಚನಗೈದರು.  

ಬೆಳ್ತಂಗಡಿ ಶ್ರೀ ಗುರುದೇವ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್,  ಬೆಂಗಳೂರು ಬಿ.ಎಸ್. ಎನ್. ಡಿ.ಪಿ. (ರಿ)ಇದರ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್,  ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆಯ ಅಧ್ಯಕ್ಷ, ವಕೀಲ ಸುರೇಶ್ ಕೆ.ಪೂಜಾರಿ,   ನಾರಾಯಣ ಗುರು ಸ್ವಾಮೀ ಸೇವಾ ಸಂಘ (ರಿ) ಶಿರ್ತಾಡಿಯ ಗೌರವಾಧ್ಯಕ್ಷ ಅಶೋಕ್ ಕುಮಾರ್ ಮಾಂಟ್ರಾಡಿ,  ನಾರಾಯಣ ಗುರು ಸ್ವಾಮಿ ಸೇವಾ ಸಂಘ (ರಿ) ಸಂಘ ಕಾಶಿಪಟ್ಣ  ಇದರ ಗೌರವಾಧ್ಯಕ್ಷ  ಪಿ.ಕೆ ರಾಜು ಪೂಜಾರಿ, ಕೃಷ್ಣ ಭಜನಾ ಮಂದಿರ ಆನೆಕೆರೆ ಕಾರ್ಕಳ ಇದರ ಪ್ರಧಾನ ಅರ್ಚಕ ಸದಾನಂದ ಶಾಂತಿ,  ನಾರಿ ಕೊಂಬು ನಾಟಿ ಬಂಟ್ವಾಳದ ಕೇಶವ ಶಾಂತಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮುಲ್ಕಿಯ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ಪ್ರದೀಪ್ ಕೋಟ್ಯಾನ್, ಕುಂದಾಪುರದ ಎಸಿಎಫ್ ಪ್ರಕಾಶ್ ಪೂಜಾರಿ  ಉಪಸ್ಥಿತರಿಸಿದರು.   

ಈ ಸಂದರ್ಭ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಕ್ರೀಡಾ ಸಮಿತಿಯ ಪದಾಧಿಕಾರಿಗಳು,  ಆರೋಗ್ಯ ಸಮಿತಿಯ ಪದಾಧಿಕಾರಿಗಳು, ಶೈಕ್ಷಣಿಕ ಸಮಿತಿಯ ಪದಾಧಿಕಾರಿಗಳು, ಯಾಗ ಸಮಿತಿಯ ಪದಾಧಿಕಾರಿಗಳು,  ಕೋಟಿ ಚೆನ್ನಯ ಯುವಶಕ್ತಿ ಹಾಗೂ ಕೋಟಿ ಚೆನ್ನಯ ಮಹಿಳಾ ಘಟಕ ಅಳಿಯೂರು ಸಹಿತ ಸಂಘದ ಆಸು ಪಾಸಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಿಲ್ಲವ ಸಮಾಜದ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಗೆಜ್ಜೆಗಿರಿ, ಯಾತ್ರಿ ನಿವಾಸದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಶ್ರೀ ನಾರಾಯಣ ಗುರು ವೈದಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಶಾಂತಿ ಮಂಗಳೂರು ಸ್ವಾಗತಿಸಿದರು.  ಸಮಿತಿಯ ಪದಾಧಿಕಾರಿಗಳಾದ ಸುನಿಲ್ ಶಾಂತಿ, ವಿಕ್ರಂ ಶಾಂತಿ ರೋಹಿತ್ ಶಾಂತಿ, ಜಯರಾಜ್ ಶಾಂತಿ, ಶರತ್ ಶಾಂತಿ, ಪ್ರದೀಪ್ ಶಾಂತಿ, ಕೃಷ್ಣಶಾಂತಿ, ಸಂಕೇತ್ ಶಾಂತಿ, ಸುಮಂತ್ ಶಾಂತಿ, ದೀಪಕ್ ಶಾಂತಿ, ರಾಜೇಶ್ ಶಾಂತಿ, ಪ್ರಸಾದ್ ಶಾಂತಿ, ಲವ ಶಾಂತಿ,  ಸುಶ್ಮಿತಾ ನಿತೇಶ್, ಶ್ರೀದೇವಿ ಅಭಿನಂದನೆ ಮತ್ತು ಗುರುವಂದನ ಗೌರವಪತ್ರವನ್ನು ವಾಚಿಸಿದರು.

ಗಣೇಶ್ ಬಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಮನೋಜ್ ಶಾಂತಿ ಕಾವೂರು ವಂದಿಸಿದರು.

ನಂತರ ಶ್ರೀ ನಾರಾಯಣ ಗುರು ತುಳು ಚಲನಚಿತ್ರ ಪ್ರದರ್ಶಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article