ಮೂಡುಬಿದಿರೆ-ಪುತ್ತಿಗೆ ವ್ಯ.ಸೇ. ಸಹಕಾರಿ ಸಂಘದಿಂದ ಪ್ರತಿಭಾ ಪುರಸ್ಕಾರ ಗೌರವ

ಮೂಡುಬಿದಿರೆ-ಪುತ್ತಿಗೆ ವ್ಯ.ಸೇ. ಸಹಕಾರಿ ಸಂಘದಿಂದ ಪ್ರತಿಭಾ ಪುರಸ್ಕಾರ ಗೌರವ


ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ-ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯು ತಮ್ಮ ಮಾಸಿಕ ಸಭೆಯ ಗೌರವಧನವನ್ನು 14 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿ, ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಿದರು.

ಸಹಕಾರಿಯ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅವರು ಮಾತನಾಡಿ, ಪಾಲಡ್ಕ ಹಾಗೂ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಒಳಗೊಂಡಿರುವ ಈ ಸಹಕಾರಿಯು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸುಧಾರಣೆಗೆ ಹಲವಾರು ರೀತಿಯಲ್ಲಿ ಶ್ರಮಿಸಿದೆ. ಸಹಕಾರಿ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿಭಾ ಪುರಸ್ಕಾರ ಯೋಜನೆಯನ್ನು ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಸ್ಥಾನಮಾನ ಗಳಿಸಿ, ಸಹಕಾರಿಯ ಸದಸ್ಯರಾಗಿ, ಗ್ರಾಹಕರಾಗಿ ಅಥವಾ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾಗುವಂತಹ ಯೋಗ ಒದಗಿ ಬರಲಿ ಎಂದು ಹಾರೈಸಿದರು.

ಕಾರ್ಯನಿರ್ವಹಣಾಧಿಕಾರಿ ತೃಪ್ತಿ ಆನಂದ ಆಚಾರ್ಯ ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ಶಶಿಧರ್ ಪಿ. ನಾಯಕ್, ನಿರ್ದೇಶಕರುಗಳಾದ ನಾರಾಯಣ ಮಡಿವಾಳ, ಪಿ. ವಿಶ್ವನಾಥ ನಾಯ್ಕ್, ನಾಗರಾಜ ಹೆಗಡೆ, ನೀರಜಾಕ್ಷಿ ಎಸ್. ಶೆಟ್ಟಿ, ವಿನುತಾ ಹೆಗ್ಡೆ, ಸುಕೇಶ್ ಪೂಜಾರಿ, ಸತೀಶ್ ಕಾವ, ಪೌಲ್ ಡಿಸೋಜ, ರಮೇಶ್, ಕಿಶೋರ್ ಕುಮಾರ್ ಹಾಗೂ ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರು (ಮೂಡುಬಿದಿರೆ ೨ನೇ ವಲಯ), ಮತ್ತು ಬ್ಯಾಂಕ್ ಪ್ರತಿನಿಧಿಗಳು ತಮ್ಮ ಸಿಟ್ಟಿಂಗ್ ಫೀಸ್‌ನ್ನು ಈ ಪ್ರತಿಭಾ ಪುರಸ್ಕಾರಕ್ಕಾಗಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article