ಮೂಡುಬಿದಿರೆ: ಮದಕ ಓಂ ಶ್ರೀ ಹಳೆವಿದ್ಯಾರ್ಥಿ ಸಂಘದಿಂದ ಕ್ರೀಡಾಕೂಟ. ವಾರ್ಷಿಕೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ
Sunday, October 26, 2025
ಮೂಡುಬಿದಿರೆ: ಕಾಂತವಾರ ಮದಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಓಂ ಶ್ರೀ ಹಳೆ ವಿದ್ಯಾರ್ಥಿ ಸಂಘದಿಂದ ಕ್ರೀಡಾಕೂಟವನ್ನು ಗೀತಾ ಅರ್.ನಾಯಕ್ ಮದಕ ದೀಪ ಬೆಳಗಿಸುವ ಮೂಲಕ ಭಾನುವಾರ ಉದ್ಘಾಟಿಸಿದರು.
ಓಂ ಶ್ರೀ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಶಾಲಾ ಹಿತೈಷಿಯಾದ ಎಂ ಸಂಜೀವ ಕೋಟ್ಯಾನ್ ಮಿತ್ತಲಚ್ಚಿಲು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ನವೆಂಬರ್ 15 ರಂದು ಜರಗುವ ಶಾಲಾ ವಾರ್ಷಿಕೋತ್ಸವದ ಅಮಂತ್ರಣ ಪತ್ರಿಕೆಯನ್ನು ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡಿಸೋಜ, ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷೆ ರಂಜಿತಾ, ಶಾಲಾ ಶಿಕ್ಷಕಿ ಪ್ರೆಸಿಲ್ಲಾ , ಅಂಗನವಾಡಿ ಕಾರ್ಯಕರ್ತೆ ಸುಜಾತ ಕೋಟ್ಯಾನ್, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಜಗದೀಶ್ ಕೋಟ್ಯಾನ್, ಹಿರಿಯರಾದ ವಿಜಯ ಪೂಜಾರ್ತಿ, ಸ್ಥಳೀಯರಾದ ಸಂಜೀವ ಕೋಟ್ಯಾನ್ ಕಡತ್ರಬೈಲು ಉಪಸ್ಥಿತರಿದ್ದರು.
ಓಂ ಶ್ರೀ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸುಕೇಶ್ ಕೋಟ್ಯಾನ್ ಕಾಂತಾವರ ಕಾರ್ಯಕ್ರಮ ನಿರೂಪಿಸಿದರು.
